ಎಸ್‌ಡಿಪಿಐಗೆ ಜೆಡಿಎಸ್ ಬೆಂಬಲ: ಜೆಡಿಯು ಖಂಡನೆ
ಮಂಗಳೂರು: ಕೋಮುವಾದಿ ಸಂಘಟನೆ ಎಸ್‌ಡಿಪಿಯೊಂದಿಗೆ ಗುರುತಿಸಿಕೊಂಡಿರುವ ಪಕ್ಷವನ್ನು ಜೆಡಿಎಸ್ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ಜೆಡಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶಾಂತ್ ಡಿಸೋಜ ಹೇಳಿದ್ದಾರೆ. ಸೌಜನ್ಯ ಕೊಲೆ ಪ್ರಕರಣ, ಪಂಜಿಮೊಗರು ಜೋಡಿ ಕೊಲೆ ಪ್ರಕರಣ ಸೇರಿದಂತೆ ಹಲವು ಹೋರಾಟಗಳಲ್ಲಿ ಸಿಪಿಎಂ ದೀನದಲಿತರ ಪರವಾಗಿ ಕಾರ್ಯನಿರ್ವಹಿಸಿದೆ. ಆದ್ದರಿಂದ ಸಿಪಿಎಂ ಅಭ್ಯರ್ಥಿ ಕೆ. ಯಾದವ ಶೆಟ್ಟಿಗೆ ಜೆಡಿಯು ಬೆಂಬಲ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.