ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತ್ರಿಡಿ ತಂತ್ರಜ್ಞಾನ: 9ರಂದು ಮೋದಿ ಭಾಷಣ

Rashmi Kasaragodu
Updated On : 7 Apr 2014, 1:20 am

ಮಂಗಳೂರು:  ತ್ರಿಡಿ ತಂತ್ರಜ್ಞಾನ ಮೂಲಕ ಮಂಗಳೂರಿನ ನೆಹರು ಮೈದಾನದಲ್ಲಿ ಮೊದಲ ಬಾರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣೆ ಪ್ರಚಾರ ನಡೆಸಲಿದ್ದಾರೆ.
ಏ.9ರಂದು ಸಂಜೆ 6.30ಕ್ಕೆ ನೆಹರು ಮೈದಾನದಲ್ಲಿ ಕಾರ್ಯಕ್ರಮ ಪ್ರಸಾರ ನಡೆಯಲಿದೆ. ವೇದಿಕೆಯಲ್ಲಿ ತ್ರೀ-ಡಿ ಹೋಲೋಗ್ರಾಫಿಕ್ ಪ್ರೊಜೆಕ್ಷನ್ ತಂತ್ರಜ್ಞಾನದ ಬೃಹತ್ ಪರದೆ ನಿರ್ಮಿಸಲಾಗುತ್ತದೆ. ನರೇಂದ್ರ ಮೋದಿ ನಿಗದಿತ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು.
45 ನಿಮಿಷದಿಂದ 1 ಗಂಟೆವರೆಗೆ ಭಾಷಣ  ನಡೆಯಲಿದೆ. ತ್ರಿಡಿ ತಂತ್ರಜ್ಞಾನದಿಂದಾಗಿ ಅವರು ಇಲ್ಲಿಂದಲೇ ಮಾತನಾಡುವಂತೆ ಭಾಸವಾಗುತ್ತದೆ. ಉಳಿದೆಲ್ಲಡೆ ವೇದಿಕೆ ಬೆಳಕು ತೆಗೆಯುವುದರಿಂದ ದೂರಕ್ಕೂ ತ್ರಿಡಿ ತಂತ್ರಜ್ಞಾನದಲ್ಲಿ ನರೇಂದ್ರ ಮೋದಿ ಸ್ಪಷ್ಟವಾಗಿ ಕಾಣುತ್ತಾರೆ.
2012ರ ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ 52 ಕಡೆ ಈ ತಂತ್ರಜ್ಞಾನ ಮೂಲಕ ಭಾಷಣ ವೀಕ್ಷಿಸುವ ಅಳಕಾಶ ಮಾಡಲಾಗಿತ್ತು.
 ಇದು ಗಿನ್ನಿಸ್‌ನಲ್ಲಿಯೂ ದಾಖಲೆಯಾಗಿದೆ. ನರೇಂದ್ರ ಮೋದಿ  185 ವಿಜಯ ಸಂಕಲ್ಪ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಜತೆಯಲ್ಲಿ ತ್ರಿಡಿ ತಂತ್ರಜ್ಞಾನ ಮೂಲಕ 1 ಸಾವಿರ ಕಡೆಗಳಲ್ಲಿ ಭಾಷಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement