ದಾಖಲೆ ರಹಿತ ರು. 1 ಲಕ್ಷ ನಗದು ವಶ
ಬೆಳ್ತಂಗಡಿ: ಚಾರ್ಮಾಡಿ ಚೆಕ್ಪೋಸ್ಟ್ನಲ್ಲಿ ಕಾರ್ಯನಿರತವಾಗಿದ್ದ ಚುನಾವಣಾ ತಪಾಸಣಾ ತಂಡ ಭಾನುವಾರ ಟಾಟಾ ಸಫಾರಿ ಕಾರಿನಲ್ಲಿ ದಾಖಲೆಗಳಿಲ್ಲದ ಸಾಗಿಸುತ್ತಿದ್ದ ರು. 1 ಲಕ್ಷ ನಗದು ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಬೆಂಗಳೂರಿನ ವಿಜಯ ಕುಮಾರ್ ರೆಡ್ಡಿ ಎಂಬವರು ಚಿಕ್ಕಮಗಳೂರಿನಿಂದ ಮಂಗಳೂರಿಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಚಾರ್ಮಾಡಿ ಚೆಕ್ಪೋಸ್ಟ್ನಲ್ಲಿ ಕಾರ್ಯನಿರತವಾಗಿದ್ದ ಚುನಾವಣಾ ಅಧಿಕಾರಿಗಳ ತಂಡ ಕಾರನ್ನು ತಪಾಸಣೆ ನಡೆಸಿದೆ. ಈ ವೇಳೆ ದಾಖಲೆಗಳಿಲ್ಲದ ರು. 1 ಲಕ್ಷ ನಗದು ಪತ್ತೆಯಾಗಿದ್ದು, ಹಣ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಯೋಗೀಶ್ ಎಚ್.ಆರ್. ತಿಳಿಸಿದ್ದಾರೆ.