ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪರಮೇಶ್ವರ್ ಟೀಕೆಗೆ ಬಜರಂಗದಳ ಆಕ್ರೋಶ

Rashmi Kasaragodu
Updated On : 7 Apr 2014, 1:20 am

ಮಂಗಳೂರು: ಮಹಿಳಾ ಕಾರ್ಪೊರೇಟರ್‌ಗೆ ಕಿರುಕುಳ ನೀಡಿದವರು ಹಿಂದು ಸಂಘಟನೆ ಕಾರ್ಯಕರ್ತರು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಹೇಳಿರುವುದು ಚುನಾವಣೆ ಲಾಭಕ್ಕಾಗಿ ಎಂದು ಬಜರಂಗದಳ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್ ಆರೋಪಿಸಿದ್ದಾರೆ. ಅಭಿವೃದ್ಧಿ ಕಾಮಗಾರಿ ಮಾಡದೆ, ಟೀಕಿಸಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರು, ಕಾರ್ಪೊರೇಟರ್ ವಿರುದ್ಧ ಸ್ಥಳೀಯರಿಗೆ ಆಕ್ರೋಶ ಇತ್ತು. ಅದನ್ನು ತೋರ್ಪಡಿಸಿದ ಸ್ಥಳೀಯರನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಎನ್ನುವ ಮೂಲಕ ಮುಖ ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಸಿಪಿಐ ಪ್ರಚಾರ ಸಭೆ
ಮಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನೇತತ್ವದ ಸರ್ಕಾರಗಳು ದೇಶವನ್ನು ದಿವಾಳಿ ಮಾಡಿದೆ. ಇವರ ಆಳ್ವಿಕೆಯಲ್ಲಿ ಬಡವರು ಬಡವರಾಗಿಯೇ ಉಳಿದಿದ್ದಾರೆ. ಕೋಮುವಾದವನ್ನು ತಡೆಯುವವರೇ ಇಲ್ಲವಾಗಿದ್ದಾರೆ ಎಂದು ಸಿಪಿಐ ಅಭ್ಯರ್ಥಿ ಕೆ. ಯಾದವ ಶೆಟ್ಟಿ ಹೇಳಿದ್ದಾರೆ. ಸಿಪಿಐ ಪರವಾಗಿ ಇವರು ಹರೇಕಳ, ಅಳಪೆ, ಉರ್ವಸ್ಟೋರ್, ಕಣ್ಣೂರು, ಬಂಟ್ವಾಳದಲ್ಲಿ ಪ್ರಚಾರ ಸಭೆ ನಡೆಸಿದರು.



ಎಸ್.ಎಂ. ಕೃಷ್ಣ ಸುಳ್ಯಕ್ಕೆ 10ರಂದು
ಸುಳ್ಯ: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜನಾರ್ದನ ಪೂಜಾರಿ ಪರವಾಗಿ ಸುಳ್ಯದಲ್ಲಿ 10ರಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈ ಪ್ರಯುಕ್ತ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement