ಮೋದಿ ಜನರಿಗೆ ನೀಡಿದ್ದು 'ಪಂಚಾಮೃತ': ಕಿಶ್ವಾರ್
ಮಂಗಳೂರು: ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಪ್ರಥಮ ಅವಧಿಯಲ್ಲಿ ಜಾರಿಗೊಳಿಸಿದ 'ಪಂಚಾಮೃತ' ಕಾರ್ಯಕ್ರಮ ಸ್ಥಳೀಯಾಡಳಿತ ಬಲಗೊಳಿಸುವಲ್ಲಿ ಸಾರ್ಥಕ ಕಂಡಿದೆ ಎಂದು ಲೇಖಕಿ ಮಧು ಪೂರ್ಣಿಮಾ ಕಿಶ್ವಾರ್ ಹೇಳಿದ್ದಾರೆ. ನಮೋ ಬ್ರಿಗೇಡ್ ವತಿಯಿಂದ ಮಂಗಳೂರಿನ ಜಗನ್ನಾಥ ರಾವ್ ವೇದಿಕೆಯಲ್ಲಿ ಭಾನುವಾರ ಅವರೇ ಬರೆದ 'ಮೋದಿ, ಮುಸ್ಲಿಂ ಮತ್ತು ಮೀಡಿಯಾ' ಕೃತಿ ಅನಾರವಣಗೊಳಿಸಿ ಮಾತನಾಡಿದರು. ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಮೋದಿ ಜಲಶಕ್ತಿ, ಪೂಜಾ ಶಕ್ತಿ, ಧ್ಯಾನ ಶಕ್ತಿ, ಜನ ಶಕ್ತಿ ಹಾಗೂ ರಕ್ಷಾ ಶಕ್ತಿ ಈ ಪಂಚ ಅಮೃತಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಗುಜರಾತ್ ಅಭಿವೃದ್ಧಿಯಲ್ಲಿ ಪಂಚಾಮೃತ ಮಂತ್ರ ಯಶಸ್ವಿಯೂ ಆಯಿತು. ಇದು ಗ್ರಾಮ ಪಂಚಾಯಿತಿ ಆಡಳಿತ ವಿಕೇಂದ್ರೀಕರಣಗೊಳಿಸಿ ಅಭಿವೃದ್ಧಿ ದಾಪುಗಾಲಿಗೆ ನೆರವಾಯಿತು ಎಂದು ಸ್ಮರಿಸಿದರು.
ಗುಜರಾತ್ನಲ್ಲಿ ಮುಸ್ಲಿಮರು ನೆಮ್ಮದಿ: ವಾಸ್ತವದಲ್ಲಿ ಮೋದಿ ಮುಸ್ಲಿಂ ವಿರೋಧಿ ಅಲ್ಲ. ಗುಜರಾತ್ನಲ್ಲಿ ಮುಸ್ಲಿಮರಿಗೆ ಮೋದಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹಾಗಾಗಿಯೇ ಕಳೆದ ಚುನಾವಣೆಯಲ್ಲಿ ಮುಸ್ಲಿಮರು ಮೋದಿಯ ಕೈಹಿಡಿದಿದ್ದಾರೆ ಎಂದರು.