ಸಿಪಿಎಂ ಪ್ರಚಾರ ಹಾಡು ಬಿಡುಗಡೆ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಸಿಪಿಎಂ ಅಭ್ಯರ್ಥಿ ಯಾದವ ಶೆಟ್ಟಿ ಪ್ರಚಾರಕ್ಕೆ ಹಾಡುಗುಳ ಸೀಡಿಯನ್ನು ಪಕ್ಷದ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಯಶವಂತ ಮರೋಳಿ ಬಿಡುಗಡೆ ಮಾಡಿದರು. ಈ ಸಂದರ್ಭ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಮಾತನಾಡಿ ಕಾಂಗ್ರೆಸ್ ದ್ವಿಮುಖ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರ ಮೇಲೆ ಹಲ್ಲೆಗಳಾದಾಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಮತಾಂಧ ನೈತಿಕ ಪೊಲೀಸ್ ಗಿರಿ ತಡೆಗಟ್ಟುವುದಾಗಿ ಹೇಳಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಏರಿದ ಬಳಿ ಮತಾಂಧ ನೈತಿಕ ಪೊಲೀಸರನ್ನು ಬಂಧಿಸುತ್ತಿಲ್ಲ. ಕಾಂಗ್ರೆಸ್ ಅಡಳಿತದಲ್ಲಿ ಅವರ ಮಹಿಳಾ ಕಾರ್ಪೊರೇಟರ್ಗೂ ರಕ್ಷಣೆ ಇಲ್ಲವಾಗಿದೆ ಎಂದು ಟೀಕಿಸಿದರು. ಸಿಪಿಎಂ ನಗರ ಕಾರ್ಯದರ್ಶಿ ಸುನಿಲ್ಕುಮಾರ್ ಬಜಾಲ್, ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪ ಕೊಂಚಾಜಿ, ಜಯಂತಿ ಬಿ.ಶೆಟ್ಟಿ ಇದ್ದರು.