ಕಾಂಗ್ರೆಸ್ ಜಾತಿ ಗೋಲ್, ಬಿಜೆಪಿ ಡಿಫೆಂಡರ್
ಕ್ಷೇತ್ರದಲ್ಲಿ ಪೂಜಾರಿ ಜಾತಿ ಪ್ರಾಬಲ್ಯ ಇದೆ. ಹೀಗಾಗಿ ಪೂಜಾರಿ ಮತಗಳನ್ನು ಸೆಳೆಯಲು ಕಾಂಗ್ರೆಸ್ ನಾನಾ ತಂತ್ರ ಮಾಡುತ್ತಿದೆ. ಬಿಜೆಪಿಯಲ್ಲಿರುವ ಬಿಜೆಪಿ ಮುಖಂಡರು ಒಳಗಿಂದೊಳಗೆ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಂದೇಶಗಳನ್ನು ಮೊಬೈಲ್ಗಳ ಮೂಲಕ, ಜನರ ಬಾಯಿಂದ ಬಾಯಿಗೆ ಹಬ್ಬಿಸುತ್ತಿದ್ದಾರೆ. ಹಿಂದೆ ಈ ರೀತಿಯ ತಂತ್ರಗಳನ್ನು ಬಿಜೆಪಿ ಮಾಡಿ ಯಶಸ್ವಿಯಾಗಿತ್ತು. ಈಗ ಬಿಜೆಪಿ ಮುಖಂಡರು ನಾವು ಪೂಜಾರಿಯನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿ ಬಂದಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿಯಲ್ಲಿರುವ ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಉಮಾನಾಥ ಕೋಟ್ಯಾನ್, ತಂಗಪ್ಪ ಬಂಗೇರ ಮತ್ತಿತರ ಬಿಜೆಪಿ ಮುಖಂಡರನ್ನು ಜನಾರ್ದನ ಪೂಜಾರಿಯ 'ಪೂಜಾರಿ ಜಾತಿ' ಬಳಕೆಗೆ ಅಡ್ಡ ನಿಲ್ಲಲು ಬಳಸುತ್ತಿದೆ.
ಜನಾರ್ದನ ಪೂಜಾರಿ ಎಲ್ಲಿ ಹೋಗುತ್ತಾರೆ, ಏನು ಹೇಳುತ್ತಾರೆ ಎಂಬ ಮಾಹಿತಿ ಪಡೆದು ಒಂದೋ ಮುಂಚಿತವಾಗಿ ಇಲ್ಲವೇ ಬಳಿಕ ಸಭೆ ನಡೆಸಿ ಬಿಜೆಪಿ ಪರ ಒಲವು ಮೂಡಿಸುವ ಯತ್ನ ನಡೆಸುತ್ತಿದ್ದಾರೆ. ಜನಾರ್ದನ ಪೂಜಾರಿ ಆಕ್ರಮಣ ಶೀಲ ಆಟ ಆಡಿ ಗೋಲ್ (ಗುರಿ) ಬಾರಿಸದಂತೆ ತಡೆಯಲು ಎದುರಾಳಿ ಬಿಜೆಪಿ ತಮ್ಮ ತಂಡದ ಹೆಚ್ಚು ಹೆಚ್ಚು ಡಿಫೆಂಡರ್ ಆಟಗಾರರನ್ನು ಪೂಜಾರಿ ಸುತ್ತಲೇ ಬಿಟ್ಟಿದ್ದಾರೆ.