ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬ್ಯಾಲೆಟ್ ಪೇಪರ್ ಅಳವಡಿಕೆ

Mainashree
Updated On : 11 Apr 2014, 11:03 am

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ವಿದ್ಯುನ್ಮಾನ ಮತಯಂತ್ರಕ್ಕೆ ಬ್ಯಾಲೆಟ್ ಪೇಪರ್ ಅಳವಡಿಸುವ ಕಾರ್ಯ ನಡೆಯಿತು.
ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರು ಸಂತ ಜೋಸೆಫರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಅಭಿರಾಮ್ ಜಿ. ಶಂಕರ್, ತಹಸೀಲ್ದಾರ್‌ಗಳಾದ ಮಹೇಶ್‌ಚಂದ್ರ, ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಕೆ. ರತ್ನ ಮತ್ತಿತರರು ಇದ್ದರು.
ವಿದ್ಯುನ್ಮಾನ ಮತಯಂತ್ರಕ್ಕೆ ಬ್ಯಾಲೆಟ್ ಪೇಪರ್ ಅಳವಡಿಸುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ಬಿ. ದೇವಯ್ಯ, ಕೋಡಿ ಚಂದ್ರಶೇಖರ್ ಉಪಸ್ಥಿತರಿದ್ದರು.  
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಚುನಾವಣೆ ಸಂಬಂಧ ವಿದ್ಯುನ್ಮಾನ ಮತಯಂತ್ರಗಳಿಗೆ ಅಭ್ಯರ್ಥಿಗಳ ಬ್ಯಾಲೆಟ್ ಪೇಪರ್ ಜೋಡಿಸುವ ಸಿದ್ಧತಾ ಕಾರ್ಯ ನಡೆದಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಎಲ್ಲಾ ರೀತಿಯ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ ಎಂದು ತಿಳಿಸಿದರು.
ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ: ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಮತದಾನದ ದಿನದಂದು ತಮ್ಮ ವ್ಯಾಪ್ತಿಯ ಮತಗಟ್ಟೆ ಕೇಂದ್ರದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಲಾಯಿತು.
ಮತದಾನ ಆರಂಭಕ್ಕೂ ಮೊದಲು ಅಣಕು ಮತದಾನ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವುದು. ಭಾವಚಿತ್ರವಿರುವ ಮತದಾರರ ಪಟ್ಟಿ, ಚುನಾವಣಾ ಆಯೋಗದ ನಿರ್ದೇಶನ ಪಾಲನೆ, ಸುರಕ್ಷತಾ ಕ್ರಮಗಳು, ಮತದಾರರ ಗುರುತಿನ ಪರಿಶೀಲನೆ ಹಾಗೂ ಆಕ್ಷೇಪಿಸಿದ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು, ಮತದಾರರು ಮತದಾನ ಮಾಡುವುದಕ್ಕೂ ಮೊದಲು ಅಳಿಸಲಾಗದ ಸಾಯಿಯನ್ನು ಹಚ್ಚುವುದು. ಮತದಾರರ ಸಹಿ ಪಡೆಯುವುದು. ಮತಗಳನ್ನು ದಾಖಲಿಸುವುದು ಹಾಗೂ ಮತದಾನದ ವಿಧಾನ, ಮತದಾರರ ಮತದಾನದ ರಹಸ್ಯ ಕಾಪಾಡುವುದು, ಅಂಧ ಹಾಗೂ ದುರ್ಬಲ ಮತದಾರರಿಂದ ಮತ ಚಲಾವಣೆಗೆ ವ್ಯವಸ್ಥೆ, ಅಂಚೆ ಮತಪತ್ರಗಳನ್ನು ನೀಡುವುದು. ಟೆಂಡರ್ ಮತಗಳು, ಮತದಾನ ಮುಕ್ತಾಯ, ದಾಖಲಿಸಿದ ಮತಗಳ ಲೆಕ್ಕ, ಮತದಾನ ಮುಕ್ತಾಯಗೊಂಡ ನಂತರ ಮತಯಂತ್ರ ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಮೊಹರು ಮಾಡುವುದು. ದಿನಚರಿ ಸಿದ್ಧಪಡಿಸುವುದು ಹಾಗೂ ಸ್ವೀಕಾರ ಕೇಂದ್ರಗಳಲ್ಲಿ ಮತಯಂತ್ರಗಳನ್ನು ಮತ್ತು ಚುನಾವಣಾ ಕಾಗದ ಪತ್ರಗಳನ್ನು ಒಪ್ಪಿಸುವುದು. ಪ್ರಿಸೈಡಿಂಗ್ ಮತ್ತು ಪೊಲಿಂಗ್ ಅಧಿಕಾರಿಗಳಿಗೆ ಸಂಕ್ಷಿಪ್ತ ಮಾಗದರ್ಶಿ ಸೂತ್ರಗಳನ್ನು ನೀಡುವುದು ಮತ್ತಿತರ ಬಗ್ಗೆ ತರಬೇತಿ ನೋಡಲ್ ಅಧಿಕಾರಿ ಎಂ. ತಿರುಮಲೇಶ್ ಮಾಹಿತಿ ನೀಡಿದರು.  ಹೆಚ್ಚುವರಿ ಡಿಸಿ ಎಚ್. ಪ್ರಸನ್ನ, ಸಹಾಯಕ ಚುನಾವಣಾಧಿಕಾರಿ ಅಭಿರಾಮ್ ಜಿ. ಶಂಕರ್, ಚುನಾವಣಾ ವಿಶೇಷ ಕರ್ತವ್ಯಾಧಿಕಾರಿ ಚಿದಾನಂದ ಮತ್ತಿತರರು ಸೆಕ್ಟರ್ ಅಧಿಕಾರಿಗಳು ಮತದಾನದದಂದು ಪಾಲಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement