ದ.ಕ. ಲೋಕಸಭೆ ಚುನಾವಣೆ: 3544 ಸಿಬ್ಬಂದಿಗೆ ವಿವಿಧೆಡೆ ತರಬೇತಿ ಮುಕ್ತಾಯ
ಮಂಗಳೂರು: ಮಂಗಳೂರು ನಗರ ಉತ್ತರ, ದಕ್ಷಿಣ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿರುವ 3544 ಸಿಬ್ಬಂದಿಗಳಿಗೆ ಶನಿವಾರ ನಗರದ ನಾಲ್ಕು ಕಡೆಯಲ್ಲಿ ತರಬೇತಿ ನಡೆಯಿತು. ಮೂಡುಬಿದಿರೆ ವಿಧಾನಸಭೆ ಕ್ಷೇತ್ರದ ಮತಗಟ್ಟೆಗಳಲ್ಲಿ 207 ಅಧ್ಯಕ್ಷರು, 207 ಸಹಾಯಕ ಅಧ್ಯಕ್ಷರು, 414 ಮತಗಟ್ಟೆ ಅಧಿಕಾರಿಗಳು ಹಾಗೂ ಒಂದು ಮತ್ತು ಎರಡು ಸೇರಿದಂತೆ ಒಟ್ಟು 825 ಸಿಬ್ಬಂದಿ ಕರ್ನಾಟಕ ಪಾಲಿಟೆಕ್ನಿಕ್ನಲ್ಲಿ ತರಬೇತಿ ನಡೆಯಿತು. ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ 226 ಮತಗಟ್ಟೆಗಳ 1040 ಸಿಬ್ಬಂದಿ ನಗರದ ಗೋಕರ್ಣನಾಥ ಕಾಲೇಜಿನಲ್ಲಿ ತರಬೇತಿ ನೀಡಲಾಯಿತು. ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 252 ಅಧ್ಯಕ್ಷರು, 252 ಸಹಾಯಕ ಅಧ್ಯಕ್ಷರು ಹಾಗೂ 504 ಮತಗಟ್ಟೆ ಅಧಿಕಾರಿಗಳಿಗೆ ಕೆನರಾ ಕಾಲೇಜಿನಲ್ಲಿ ತರಬೇತಿ ನೀಡಲಾಯಿತು. ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ 225 ಅಧ್ಯಕ್ಷರು, 225 ಸಹಾಯಕ ಅಧ್ಯಕ್ಷರು ಹಾಗೂ 450 ಪೋಲಿಂಗ್ ಅಧಿಕಾರಿಗಳಿಗೆ ನಗರದ ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ನೀಡಲಾಯಿತು.
ಉಜಿರೆ ಎಸ್ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದ ಸಿಬ್ಬಂದಿ ಹಾಗೂ ಬಂಟ್ವಾಳ ವಿಧಾನಸಭೆ ಕ್ಷೇತ್ರದ ಸಿಬ್ಬಂದಿ ಮೊಡಂಕಾಪು ಇನ್ಫೆಂಟ್ ಜೀಸಸ್ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ನೀಡಲಾಯಿತು.