ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಜೆಪಿ, ಮೋದಿ ಮುಖವಾಡ ಕಳಚುತ್ತಿದೆ: ಪೂಜಾರಿ ಟೀಕೆ

Lingaraj Badiger
Updated On : 15 Apr 2014, 1:36 am

ಬೆಳ್ತಂಗಡಿ: ಸುಳ್ಳುಗಳನ್ನೇ ಹೇಳಿ ಅದನ್ನು ಸತ್ಯ ಮಾಡಲು ಹೊರಟಿರುವ ಬಿಜೆಪಿ ಹಾಗೂ ನರೇಂದ್ರ ಮೋದಿಯ ಮುಖವಾಡಗಳು ಒಂದೊಂದಾಗಿಯೇ ಕಳಚಿಕೊಳ್ಳುತ್ತಿದೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಹೇಳಿದರು. ಮಡಂತ್ಯಾರಿನಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪಾದಯಾತ್ರೆಯ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು. ಮೋದಿ ಈವರೆಗೆ ಯಾಕೆ ಸುಳ್ಳು ಹೇಳುತ್ತಿದ್ದರು. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿಯೂ ಅವರು ಅವಿವಾಹಿತನೆಂದು ದಾಖಲೆ ಸಲ್ಲಿಸಿದ್ದು ಯಾಕೆ, ಕನಿಷ್ಠ ತನಗೆ ವಿವಾಹವಾಗಿದೆ ಎಂದು ಹೇಳಿ ಕೊಳ್ಳಬಹುದಿತ್ತಲ್ಲ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹವೆಂಬುದು ಪವಿತ್ರವಾದದ್ದು. ಅದನ್ನು ಕದ್ದುಮುಚ್ಚಿ, ಪತ್ನಿಗೆ ಅನ್ಯಾಯ ಮಾಡುವುದು ಅನ್ಯಾಯ ಎಂದರು.
ಪ್ರವಾಸೋದ್ಯಮ ಕೇಂದ್ರವಾಗಿ ಮಂಗಳೂರು: ನಳಿನ್ ಭರವಸೆ
ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಬಿಜೆಪಿಯ ಆಯ್ಕೆಯೊಂದಿಗೆ ಮಂಗಳೂರನ್ನು ಪ್ರವಾಸೋದ್ಯಮ ಆಧಾರದಲ್ಲಿ ಅಭಿವೃದ್ಧಿ ಪರ ಕೇಂದ್ರವನ್ನಾಗಿ ಪರಿವರ್ತಿಸುವುದು, ಯುವಕರಿಗೆ ಉದ್ಯೋಗ, ಸ್ವಾವಲಂಬಿ ಬದುಕು, ನೆಮ್ಮದಿ, ಸಾಮರಸ್ಯದ ಸಮಾಜವನ್ನು ನೀಡಲು ಬದ್ಧ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ಮಂಚಿ, ಸಾಲೆತ್ತೂರು ಪರಿಸರದಲ್ಲಿ ಮತಯಾಚನೆ ಬಳಿಕ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿವಿಧ ಮಾಧ್ಯಮ ಸಮೀಕ್ಷೆಗಳು ದೇಶದಲ್ಲಿ ಸಮಗ್ರ ಸಾಧನೆ ಮಾಡಿದ ಅತ್ಯುತ್ತಮ ಸಂಸದರ ಪೈಕಿ ತಾನು 6ನೇ ಸ್ಥಾನದಲ್ಲಿದ್ದು, ಸಂಸದರ ನಿಧಿ ಬಳಕೆಯಲ್ಲೂ ಮೊದಲ ಸ್ಥಾನ ನೀಡಿದೆ. ಇಂದು ದೇಶದ ಸಂಸದರ ಪೈಕಿ ಗರಿಷ್ಠ ಸ್ಥಾನ ಗಳಿಸಿ ಆರಿಸಿದ ಜನತೆಗೆ ಸೇವೆ ಸಲ್ಲಿಸಿದ್ದೇನೆ ಎಂದರು.
ಎಸ್‌ಡಿಪಿಐ ಅಭ್ಯರ್ಥಿಯಿಂದ
ಮುಸ್ಲಿಂ ಮುಖಂಡರ ಭೇಟಿ
ಮಂಗಳೂರು: ಜೆಡಿಎಸ್ ಬೆಂಬಲಿತ ಎಸ್‌ಡಿಪಿಐ ಅಭ್ಯರ್ಥಿ ಹನೀಫ್ ಖಾನ್ ಕೊಡಾಜೆ ಧಾರ್ಮಿಕ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದರು. ಕಾಂಗ್ರೆಸ್, ಬಿಜೆಪಿ ದುರಾಡಳಿತಕ್ಕೆ ಪರ್ಯಾಯ ಮಾರ್ಗಗಳ ಕುರಿತು ಚರ್ಚಿಸಿ ಎಸ್‌ಡಿಪಿಐ ಪರವಾಗಿ ಮತ ಯಾಚಿಸಿದರು. ಅಖಿಲ ಭಾರತ ಸುನ್ನಿ ಜಮೀಯುತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ, ದ.ಕ. ಜಿಲ್ಲಾ ಖಾಜಿ ತ್ವಾಕ ಅಹ್ಮದ್ ಮುಸ್ಲಿಯಾರ್, ಉಳ್ಳಾಲ ಖಾಝಿ ಪಝಲ್ ಕೊಯಮ್ಮ ತಂಙಳ್ ಕೂರ, ಸಮಸ್ತ ಕೇರಳ ಕೇಂದ್ರ ಮುಶಾವರ ಸಮಿತಿ ಸದಸ್ಯರಾದ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಮಿತ್ತಬೈಲ್ ಯಹ್ಯಾ ತಂಙಳ್ ಬೋಳಂಗಡಿ ಅವರನ್ನು ಭೇಟಿಯಾಗಿ ಮತ ಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement