ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಲ್ಕು ಜಿಲ್ಲೆಗಳಲ್ಲಿ ಬಿಗು ಭದ್ರತೆ

Lingaraj Badiger
Updated On : 16 Apr 2014, 1:53 am

ಮಂಗಳೂರು: ಪಶ್ಚಿಮ ವಲಯದ ನಾಲ್ಕು ಜಿಲ್ಲೆಗಳಲ್ಲಿರುವ ಮೂರು ಲೋಕಸಭೆ ಕ್ಷೇತ್ರದಲ್ಲಿ ಸುಗಮ ಮತದಾನಕ್ಕೆ ಬಿಗು ಬಂದೋಬಸ್ತ್ ವಹಿಸಲಾಗಿದೆ.
ಸುಗಮ ಮತದಾನಕ್ಕಾಗಿ 841 ಅಧಿಕಾರಿಗಳು ಸೇರಿದಂತೆ 4053 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮೊಬೈಲ್ ಘಟಕದಲ್ಲಿ 592 ಸಿಬ್ಬಂದಿ ಇದ್ದಾರೆ. 1400 ಕೇಂದ್ರೀಯ ಅರೆಸೇನಾ ಪಡೆ ನಿಯೋಜಿಸಲಾಗಿದೆ ಎಂದು ಪ್ರಭಾರ ಐಜಿಪಿ ಆರ್.ಹಿತೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು , ಕೆನರಾಕ್ಷೇತ್ರಗಳಲ್ಲಿ 21 ವಿಧಾನ ಸಭೆ ಕ್ಷೇತ್ರಗಳಿವೆ. ಇದರಲ್ಲಿ 35 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 158 ನಕ್ಸಲ್ ಪೀಡಿತ, 417 ಸೂಕ್ಷ್ಮ, 1269 ಅತಿ ಸೂಕ್ಷ್ಮ, 2652 ಸಾಮಾನ್ಯ ಸಹಿತ ಒಟ್ಟು 4,604 ಮತಗಟ್ಟೆಗಳಿವೆ.
ಉಸ್ತುವಾರಿ: ಚುನಾವಣೆ ಬಂದೋ ಬಸ್ತ್ ಉಸ್ತುವಾರಿ ಹೀಗಿದೆ. ಮೂಡುಬಿದರೆಗೆ ಸಂಚಾರಿ ಎಸಿಪಿ ಉದಯ ನಾಯಕ್, ಮಂಗಳೂರು ಉತ್ತರಕ್ಕೆ ಎಸಿಪಿ ರವಿ ಕುಮಾರ್, ದಕ್ಷಿಣಕ್ಕೆ ಎಸಿಪಿ ಸದಾನಂದ ವರ್ಣೇಕ್, ಮಂಗಳೂರಿಗೆ ಎಸಿಪಿ ಪವನ್ ನಿಜ್ಜೂರ್ ಹಾಗೂ ಡಿಸಿಪಿ ವಿಷ್ಣುವರ್ಧನ್ ಮತ್ತು ಡಿಸಿಪಿ ಜಗದೀಶ್ ಉಸ್ತುವಾರಿ ವಹಿಸುವರು ಎಂದರು. ನಗರದಲ್ಲಿ 19 ಚೆಕ್‌ಪೋಸ್ಟ್ ಕಾರ್ಯನಿರತವಾಗಿದೆ. 849 ಮತಗಟ್ಟೆಗಳನ್ನು 52 ಸೆಕ್ಟರ್ ಆಗಿ ವಿಭಜಿಸಿ, ಸಬ್‌ಇನ್‌ಸ್ಪೆಕ್ಟರ್‌ಗಳನ್ನು ಸೆಕ್ಟರ್ ಮೊಬೈಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದರು.
 ಮೂಡುಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ ಮಂಗಳೂರ ವಿಧಾನಸಭೆ ಕ್ಷೇತ್ರಗಳ ಮಾಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ 16, 17ರಂದು ನಡೆಯಲಿದೆ. ಮತದಾನ ಬಳಿಕ ಮತ ಯಂತ್ರಗಳನ್ನು ಬೋಂದೆಲ್ ಮಹಾತ್ಮಾ ಗಾಂಧಿ ಸೆಂಟಿನರಿ ಸಂಯುಕ್ತ ಪಿ.ಯು. ಕಾಲೇಜ್ ಭದ್ರತೆ ಕೊಠಡಿಯಲ್ಲಿ ಇರಿಸಲಾಗುವುದು. ಬಂದೋ ಬಸ್ತ್ ಕಾರ್ಯಕ್ಕೆ ಮೂರು ಪಾಳಿಯಲ್ಲಿ ಒಬ್ಬರು ಎಸಿಪಿ, ಇಬ್ಬರು ಇನ್‌ಸ್ಪೆಕ್ಟರ್, 5 ಸಬ್‌ಇನ್‌ಸ್ಪೆಕ್ಟರ್ 10 ಎಎಸ್‌ಐ 24 ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮೂಡು ಬಿದಿರೆ (ಕೆಪಿಟಿ ಕದ್ರಿ), ಮಂಗಳೂರು ಉತ್ತರ (ಗೋಕರ್ಣನಾಥೇಶ್ವರ ಪಿಯು ಕಾಲೇಜ್), ಮಂಗಳೂರು ದಕ್ಷಿಣ (ಕೆನರಾ ಹೈಸ್ಕೂಲ್ ಉರ್ವ), ಮಂಗಳೂರು (ಬಂಟ್ಸ್ ಹಾಸ್ಟೆಲ್ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ನಡೆಯಲಿದೆ. ಈ ಕೇಂದ್ರಗಳಿಗೆ ಭದ್ರತೆ ವ್ಯವಸ್ಥೆಯನ್ನು ಎಸಿಪಿ ಜಿ.ಬಿ.ಸುಬ್ರಹ್ಮಣ್ಯ ಅವರನ್ನು
ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement