ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

14 ಅಭ್ಯರ್ಥಿ ಭವಿಷ್ಯ ನಿರ್ಧಾರ ಇಂದು

Rashmi Kasaragodu
Updated On : 17 Apr 2014, 11:55 am

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸಹಿತ 14 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಣಯವಾಗಲಿದೆ.
ಬೆಳಗ್ಗೆ 7ರಿಂದ ಸಂಜೆ 6ವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 15,64093 ಮತದಾರರು ಅಭ್ಯರ್ಥಿಯ ಭವಿಷ್ಯ ನಿರ್ಧರಿಸುವರು. ಈ ಬಾರಿ 68 ಮಂಗಳಮುಖಿಯರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿರುವುದು ವಿಶೇಷ. ಜಿಲ್ಲೆಯಲ್ಲಿ 62 ನಕ್ಸಲ್ ಪೀಡಿತ ಮತಗಟ್ಟೆಗಳಿದ್ದು, ಪೊಲೀಸರು ಎಲ್ಲೆಡೆ ಬಿಗುಬಂದೋಬಸ್ತ್ ಮಾಡಿದ್ದಾರೆ. ಮತಗಟ್ಟೆ ಕರ್ತವ್ಯಕ್ಕೆ 8,108 ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಒಟ್ಟು 14 ಅಭ್ಯರ್ಥಿಗಳು: ಕಾಂಗ್ರೆಸ್ -ಜನಾರ್ದನ ಪೂಜಾರಿ, ಬಿಜೆಪಿ -ನಳಿನ್ ಕುಮಾರ್ ಕಟೀಲ್, ಬಹುಜನ ಸಮಾಜ ಪಕ್ಷ -ಮೂಸೆ ಕುಂಞ ಯಾನೆ ಅಬ್ದುಲ್ ಕರೀಂ, ಸಿಪಿಐಎಂ -ಕೆ. ಯಾದವ ಶೆಟ್ಟಿ, ಆಮ್ ಆದ್ಮಿ ಪಕ್ಷ- ಎಂ.ಆರ್.ವಾಸುದೇವ, ಹಿಂದುಸ್ತಾನ್ ಜನತಾ ಪಾರ್ಟಿ- ಸುಪ್ರಿತ್ ಕುಮಾರ್ ಪೂಜಾರಿ, ಎಸ್ಡಿಪಿಐ- ಹನೀಫ್ ಖಾನ್ ಕೊಡಾಜೆ, ಪಕ್ಷೇತರರು- ಅಡ್ವಕೇಟ್ ಆನಂದ ಗಟ್ಟಿ, ಕೆ.ಕುಶಲ ಬೆಳ್ಳಾರೆ, ದೀಪಕ್ ರಾಜೇಶ್ ಕುವೆಲ್ಲೊ, ಮೆಕ್ಸಿಂ ಪಿಂಟೋ, ಸುದತ್ತ ಜೈನ್ ಶಿರ್ತಾಡಿ, ಸುಬ್ರಹ್ಮಣ್ಯ ಗೌಡ ಕೆ., ಕೆ.ಎನ್.ಸೋಮಶೇಖರ್.


 ವಿಶೇಷತೆಗಳು


ಎಸ್ಎಂಎಸ್ ಮೂಲಕ 1 ದಿನ ಮುಂಚಿತವಾಗಿ ಮತಗಟ್ಟೆ  ಹಂಚಿಕೆ ವಿವರ
ವಾಯ್ಸ್ ಕರೆ ಮೂಲಕ ಆಯೋಗಕ್ಕೆ ಶೇಕಡಾವಾರು ಮತದಾನ ವಿವರ
ಮತದಾರರನ್ನು ಮತಗಟ್ಟೆಗಳಿಗೆ ಕರೆತರಲು ಆಯ್ದ ಕಡೆ ಬಸ್ ವ್ಯವಸ್ಥೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement