ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

24ರಂದು ಮನೆ ಪ್ರವೇಶಕ್ಕೆ ಪರಿಸರ ಸಾಹಿತ್ಯ ಸಮ್ಮೇಳನ

Rashmi Kasaragodu
Updated On : 17 Apr 2014, 11:58 am

ಮಂಗಳೂರು: ಮಂಗಳೂರಿನ ಅಶೋಕನಗರದ ಶೇಡಿಗುರಿಯಲ್ಲಿ ಶಾಸ್ತಾ ಹೊಸ ಮನೆ ಪ್ರವೇಶ ಪರಿಸರ ಸಾಹಿತ್ಯ ಸಮ್ಮೇಳನದೊಂದಿಗೆ ನಡೆಯಲಿದೆ.
ಏ.24ರಂದು ಪರಿಸರ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಇದನ್ನು ಆಯೋಜಿಸಿದೆ ಎಂದು ಒಕ್ಕೂಟ ಅಧ್ಯಕ್ಷ ಸ್ವರ್ಣ ಸುಂದರ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಳಗ್ಗೆ 10.30ಕ್ಕೆ ಪರಿಸರ ವಿಜ್ಞಾನಿ ನಾಗೇಶ್ ಹೆಗಡೆ ಸಮ್ಮೇಳನ ಉದ್ಘಾಟಿಸಿ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಸಮ್ಮೇಳನ ನಿಕಟಪೂರ್ವ ಅಧ್ಯಕ್ಷ ನಾ ಡಿಸೋಜ ಸಮಾರೋಪ ಭಾಷಣ ಮಾಡುವರು. ಪ್ರಜಾವಾಣಿ ಸ್ಥಾನೀಯ ಸಂಪಾದಕ ಬಾಲಕೃಷ್ಣ ಪುತ್ತಿಗೆ ಅತಿಥಿಯಾಗಿ ಭಾಗವಹಿಸುವರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಪ್ರದರ್ಶನ ಉದ್ಘಾಟಿಸುವರು. ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಜಿತಕಾಮನಂದಜಿ ಹಾಗೂ ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ ಅವರು ಕೃತಿ ಲೋಕಾರ್ಪಣೆ ಮಾಡುವರು.
ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ವಿಶ್ರಾಂತ ಪ್ರೊಫೆಸರ್ ಎ.ಎ.ರಿಚರ್ಡ್ ರೆಬೆಲ್ಲೋ 'ನೀರಿಗಾಗಿ ಬದುಕು' ಬಗ್ಗೆ ಮಾತನಾಡುವರು. ಈ ಸಂವಾದದಲ್ಲಿ ಕನ್ನಡ ಕಟ್ಟೆ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಸಹ್ಯಾದ್ರಿ ಸಂರಕ್ಷಣಾ ಸಂಚಯ ಸಂಚಾಲಕ ದಿನೇಶ್ ಹೊಳ್ಳ, ಮಹಾನಗರ ಪಾಲಿಕೆ ಸದಸ್ಯೆ ನಾಗವೇಣಿ, ನಿವೃತ್ತ ಪ್ರಾಂಶುಪಾಲ ಎಂ.ರಾಘವೇಂದ್ರ ರಾವ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀನಿವಾಸ ರಾವ್, ನಿವೃತ್ತ ಶಿಕ್ಷಕ ಶಂಭು ಶೆಟ್ಟಿ ಮಾತನಾಡುವರು.
ಬೆಳಗ್ಗೆ 9ರಿಂದ ಡಾ.ಸುಶೀಲಾ ರಾವ್ರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ, ಹೇರಿಕುದ್ರು ಶಶಿಧರ ಶೆಟ್ಟಿ ರಚಿತ ಭಕ್ತಿಗೀತೆ ಮತ್ತು ಪರಿಸರ ಗೀತೆ, ಪರಿಸರ ಸಾಹಿತ್ಯ ಪುಸ್ತಕ ಪ್ರದರ್ಶನ ಮತ್ತು ಸಾವಯವ ಸಂತೆ, ವೈವಿಧ್ಯಮಯ ಗಿಡಗಳ ಪ್ರದರ್ಶನ, ಮಧ್ಯಾಹ್ನ 2.30ರಿಂದ ಕಾಡೇ ಕೂಗುಸ್ವರೂಪ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳಿಂದ ಪರಿಸರ ಗೀತೆ ಮತ್ತು ನಾಟಕ ಏರ್ಪಡಲಿದೆ. 7.30ಕ್ಕೆ 'ರಾಜಾ ರುದ್ರಕೋಪ' ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಒಕ್ಕೂಟ ಕಾರ್ಯದರ್ಶಿ ಹೇರಿಕುದ್ರು ಶಶಿಧರ ಶೆಟ್ಟಿ, ಗೋಪಾಡ್ಕರ್, ಪ್ರಕಾಶ್ ಕೊಟ್ಟಾರಿ, ಕಲಾವತಿ ಪದ್ಮನಾಭ, ಅರುಣ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement