ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

26 ರಂದು ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ

Rashmi Kasaragodu
Updated On : 17 Apr 2014, 11:58 am

ಮಂಗಳೂರು: ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಪ್ರಯುಕ್ತ ಏ. 26 ರಂದು ನಗರದ ಪಶು ಆಸ್ಪತ್ರೆಯಲ್ಲಿ ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಲಸಿಕೆ ಕಾರ್ಯಕ್ರಮ ನಡೆಯಲಿದೆ. ಶ್ವಾನ ಪಾಲಕರು ತಮ್ಮ ನಾಯಿಗಳನ್ನು ತಂದು ಹುಚ್ಚು ನಾಯಿ ನಿರೋಧಕ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಸಂಘದ ಅಧ್ಯಕ್ಷ ಡಾ.ಜಿ. ಶಿವಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


19ರಂದು ಸೇಬು ಕೃಷಿ
ವಿಚಾರ ಮಂಥನ
ಮಂಗಳೂರು: ಹಿಮಾಚಲ ಪ್ರದೇಶದ ಹಿರಿಯ ತೋಟಗಾರಿಕೆ ತಜ್ಞ ಡಾ. ಚಿರನ್ಚಿತ್ ಪರ್ಮಾರ್ ಏ. 19 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿ3 ಇನ್ಲ್ಯಾಂಡ್ ಅವೆನ್ಯೂದ ಪ್ರೋಲೈನ್ ಫಿಟ್ನೆಸ್ ಕಚೇರಿಯಲ್ಲಿ 'ಸೇಬು ಕೃಷಿಯ ಬಗ್ಗೆ ವಿಚಾರ ಮಂಥನ' ನಡೆಸುವರು. ಸಭೆಯಲ್ಲಿ ಡಾ. ಪರ್ಮಾರ್ ಅವರು ಕರ್ನಾಟಕದ ಸೇಬುಕೃಷಿ ಪ್ರಯೋಗ: ಮುಂದಿನ ಸಾಧ್ಯತೆಗಳು ಕುರಿತು ಪವರ್ಪಾಯಿಂಟ್ ಪ್ರೆಸೆಂಟೆಶನ್ ನಡೆಸುವರು. ನಂತರ ಕೃಷಿಕರೊಂದಿಗೆ ಸಂವಾದ ಮಾಡುವರು. ನಂತರ ಕೊಡಗಿನ ಸೋಮವಾರಪೇಟೆ, ತುಮಕೂರಿಗೆ ತೆರಳಿ ಅಲ್ಲಿನ ಸೇಬು ಗಿಡಗಳ ಸ್ಥಿತಿಗತಿ ಗಮನಿಸುವರು. ಕಾರ್ಯಕ್ರಮದಲ್ಲಿ ಅಡಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಮತ್ತು ಕಾರ್ಯಕ್ರಮ ಸಂಯೋಜಕ ಕೃಷ್ಣ ಶೆಟ್ಟಿ ಕಾಟುಕುಕ್ಕೆ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗೆ 9448484198.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement