ಕಡಿಮೆ ವರಮಾನದವರಿಗೆ ಆರೋಗ್ಯ ಸುರಕ್ಷಾ ಯೋಜನೆ
ಮಂಗಳೂರು: ಮಣಿಪಾಲ ವಿಶ್ವವಿದ್ಯಾಲಯ ವತಿಯಿಂದ ಅತ್ತಾವರ ಹಾಗೂ ಆಸುಪಾಸಿನ 12 ವಾರ್ಡುಗಳ ಕಡಿಮೆ ವಾರ್ಷಿಕ ವರಮಾನವಿರುವ ನಿವಾಸಿಗಳಿಗೆ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆ ಹಮ್ಮಿಕೊಳ್ಳಲಾಗಿದೆ.
ಅತ್ತಾವರ, ಬಾಬುಗುಡ್ಡೆ, ನಂದಿಗುಡ್ಡೆ, ಮುಳಿಹಿತ್ಲು, ಬೋಳಾರ, ಮಂಗಳಾದೇವಿ, ಮೋರ್ಗನ್ಸ್ಗೇಟ್, ಜೆಪ್ಪು ಕುಟ್ಪಾಡಿ, ಹೈಗೆ ಬಜಾರ್, ಮಹಾಕಾಳಿಪಡ್ಪು, ಜೆಪ್ಪು ಬಪ್ಪಾಲ್ ಹಾಗೂ ಪಾಂಡೇಶ್ವರ ನಿವಾಸಿಗಳು ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯಲ್ಲಿ ಹೊಸದಾಗಿ ನೊಂದಾಯಿಸಲು ಹಾಗೂ ಈಗಾಗಲೇ ಸದಸ್ಯರಾದವರಿಗೆ ಮರುನೋಂದಣೆಗೆ ಅವಕಾಶವಿರುತ್ತದೆ. ಯೋಜನೆಯಲ್ಲಿ ಉಚಿತ ಹೊರರೋಗಿ ವೈದ್ಯಕೀಯ ತಪಾಸಣೆ, ರಿಯಾಯಿತಿ ದರದಲ್ಲಿ ಪ್ರಯೋಗಾಲಯ ಸೇವೆ, ಔಷಧಿ, ಎಕ್ಸ್ರೇ, ಸ್ಕ್ಯಾನಿಂಗ್ ಸೌಲಭ್ಯ ದೊರಕುತ್ತದೆ.
ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದಲ್ಲಿ ಪ್ರತಿ ಕುಟುಂಬಕ್ಕೆ ರು. 30 ಸಾವಿರವರೆಗಿನ ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. ಆಸಕ್ತರು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಭರ್ತಿ ಮಾಡಿದ ಅರ್ಜಿ ಸಲ್ಲಿಸಬಹುದು. ಏ. 18 ಕೊನೆ ದಿನ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಧುಸೂದನ್ ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.