ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಂಟ್ವಾಳ: ಅಚ್ಚುಕಟ್ಟು ವ್ಯವಸ್ಥೆ ನಿಭಾಯಿಸಿದ ಚುನಾವಣೆ ಆಯೋಗ

Rashmi Kasaragodu
Updated On : 17 Apr 2014, 11:55 am

ಬಂಟ್ವಾಳ: ಲೋಕಸಮರಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ಸಿಬ್ಬಂದಿ ಮತಯಂತ್ರದೊಂದಿಗೆ ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ವಠಾರದಿಂದ ಬಿಗಿ ಭದ್ರತೆಯಲ್ಲಿ ಮತಗಟ್ಟೆಗೆ ಪಯಣ ಬೆಳೆಸಿದರು. ಬುಧವಾರ ಬೆಳಗ್ಗಿನಿಂದಲೇ ಚುನಾವಣಾ ಸಿದ್ಧತೆ ಪ್ರಕ್ರಿಯೆ  ಬಿರುಸಿನ ನಡೆದಿದ್ದು, ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ, ಸಿಬ್ಬಂದಿಗೆ ತರಬೇತಿ ಸೇರಿದಂತೆ ವಿವಿಧ ಮಾಹಿತಿ ನೀಡಲಾಯಿತು. ಮಧ್ಯಾಹ್ನದ ಹೊತ್ತಿಗೆ ಆಯಾ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ತಮಗೆ ಗುರುತಿಸಲಾದ ಮತಗಟ್ಟೆಗೆ ಹೊರಟರು.
240 ಮತಗಟ್ಟೆ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿದ್ದು ಇದರಲ್ಲಿ ಅತಿ ಸೂಕ್ಷ್ಮ 16, ಸೂಕ್ಷ್ಮ 48, 168 ಸಾಮಾನ್ಯ, 2 ಕ್ರಿಟಿಕಲ್ ಹಾಗೂ ಕಲ್ಲಡ್ಕ, ಕೊಡಂಗೆ ಸೇರಿದಂತೆ 6 ಮತಗಟ್ಟೆಯನ್ನು ವಲ್ನರೇಬಲ್ ಮತಗಟ್ಟೆಯೆಂದು ಪರಿಗಣಿಸಲಾಗಿದೆ.
ಮಹಿಳೆಯರೇ ಅಧಿಕ: ಬಂಟ್ವಾಳ ಕ್ಷೇತ್ರದಲ್ಲಿ ಪುರುಷ ಮತದಾರರಕ್ಕಿಂತ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದ 2,01,422 ಮತದಾರರು ಮತ ಚಲಾಯಿಸಬೇಕಾಗಿದ್ದು, ಈ ಪೈಕಿ 1,00,588 ಪುರುಷರು ಹಾಗೂ 1,00,845 ಮಹಿಳೆಯರೂ ಸೇರಿದ್ದಾರೆ. ಪ್ರತಿ ಬೂತ್ಗೂ ಓರ್ವ ಕಾನ್ಸ್ಟೇಬಲ್ ಹಾಗೂ ಓರ್ವ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಅತಿಸೂಕ್ಷ್ಮ, ಕ್ರಿಟಿಕಲ್ ಹಾಗೂ 6 ವಲ್ನರೇಬಲ್ ಮತಗಟ್ಟೆಗಳು ಸೇರಿ 24 ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement