ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ ಕ್ಷೇತ್ರಾದ್ಯಂತ ಉತ್ಸಾಹದ ಅಲೆ

Mainashree
Updated On : 18 Apr 2014, 10:20 am

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರಾದ್ಯಂತ ಶಾಂತಿಯುತವಾಗಿ ಮತ್ತು ಉತ್ಸಾಹದಿಂದ ಮತದಾನ ನಡೆದಿದೆ. ಕ್ಷೇತ್ರದ ಬಹುತೇಕ ಮತದಾನ ಕೇಂದ್ರಗಳಲ್ಲಿ ಬೆಳಗ್ಗಿನಿಂದಲೇ ಸರತಿ ಸಾಲು ಕಂಡು ಬಂದಿದ್ದು, ಬಹುತೇಕ ಕಡೆಗಳಲ್ಲಿ ಮಧ್ಯಾಹ್ನದ ವೇಳೆಗಾಗಲೇ ಮತದಾನದ ಪ್ರಮಾಣ ಶೇ.60 ದಾಟಿತ್ತು. ಉಬರಡ್ಕ ಮಿತ್ತೂರು, ಕಲ್ಮಡ್ಕ ಮತದಾನ ಕೇಂದ್ರಗಳಲ್ಲಿ ಮತಯಂತ್ರದಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ಮತದಾನ ಒಂದು ಗಂಟೆ ತಡವಾಗಿ ಆರಂಭಗೊಂಡಿತು.
ಕುಸಿದ ವೃದ್ಧೆ, ಬೈಕ್ ಡಿಕ್ಕಿ: ಕುಂಬಳಚೇರಿ ಮತಗಟ್ಟೆಗೆ ಮತ ಚಲಾಯಿಸಲು ಬಂದ ಐತಮ್ಮ ಎಂಬ ವೃದ್ಧೆ ಕುಸಿದುಬಿದ್ದ ಘಟನೆ ನಡೆಯಿತು. ಅರಂಬೂರಿನಲ್ಲಿ ಮತಚಲಾಯಿಸಲು ಬಂದ ಮಹಿಳೆಗೆ ಬೈಕ್ ಢಿಕ್ಕಿ ಹೊಡೆಯಿತು. ಗಾಂಧಿನಗರ ಮತದಾನ ಕೇಂದ್ರದಲ್ಲಿ ಆಮ್ ಆದ್ಮಿ ಬೆಂಬಲಿಗರು ತಮ್ಮ ಚಿಹ್ನೆಯಾದ ಪೊರಕೆಯೊಂದಿಗೆ ನಿಂತಿದ್ದರು. ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ತಾಲೂಕಿನ ವಿವಿಧ ಬೂತ್‌ಗಳ ಬಳಿ ತೆರಳಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement