ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತಯಂತ್ರ ಭದ್ರ

Lingaraj Badiger
Updated On : 19 Apr 2014, 11:49 am

ಮಂಗಳೂರು: ಲೋಕಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬೊಂದೇಲ್‌ನ ಮಹಾತ್ಮಾಗಾಂಧಿ ಸ್ಮಾರಕ ಶತಮಾನೋತ್ಸವ ಶಾಲಾ ಕೊಠಡಿಯಲ್ಲಿ(ಸ್ಟ್ರಾಂಗ್ ರೂಂ) ಭದ್ರ ಕಾವಲಿನಲ್ಲಿ ಇಡಲಾಗಿದೆ.
 ತಾಲೂಕಿನ ಎಂಟು ವಿಧಾನಸಭಾ ಕ್ಷೇತ್ರದಿಂದ ಗುರುವಾರ ಆಗಮಿಸಿದ ಒಟ್ಟು 1,766 ಎಲೆಕ್ಟ್ರಾನಿಕ್ ಮತಯಂತ್ರವನ್ನು ಶಾಲೆಯ ವಿವಿಧ ಎಂಟು ಕೊಠಡಿಯಲ್ಲಿ ಇರಿಸಲಾಗಿದೆ. ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ ಬದಲಿಗೆ ನೀಡಿದ ಹೆಚ್ಚುವರಿ 6 ಮತ ಯಂತ್ರವೂ ಇಲ್ಲಿದೆ. ಈ ಪ್ರಕ್ರಿಯೆ ಶುಕ್ರವಾರ ಮುಂಜಾನೆ ಮುಗಿದಿದೆ. ಎಂಟು ಕೊಠಡಿಗೂ ಮೊಹರು ಹಾಕಲಾಗಿದ್ದು, ಮತಎಣಿಕೆ ದಿನ ಮೇ 16ರಂದು ಬೀಗ ತೆರೆಯಲಾಗುತ್ತದೆ. ಅಲ್ಲಿವರೆಗೆ ಪ್ರತಿ ಕೊಠಡಿಗೆ ತಲಾ ಇಬ್ಬರು ಬಿಎಸ್‌ಎಫ್ ಹಾಗೂ ಸಿವಿಲ್ ಪೊಲೀಸರು ಕಾವಲು ಇರುತ್ತಾರೆ. ಇದಲ್ಲದೆ ಒಂದೊಂದು ಕೊಠಡಿಯಲ್ಲಿ ಶಾಸನಬದ್ಧ ಮತದಾನದ ಅಂಕಿಅಂಶದ ದಾಖಲೆಪತ್ರಗಳನ್ನು ಭದ್ರತೆಯಲ್ಲಿ ಇಡಲಾಗಿದೆ. ಸುಮಾರು ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments