ಕೆಬಿಎಲ್: ರು. 83 ಸಾವಿರ ಕೋಟಿ ವಹಿವಾಟು ಗುರಿ
ಮಂಗಳೂರು: ಕರ್ಣಾಟಕ ಬ್ಯಾಂಕ್ 2015 ಮಾರ್ಚ್ ವರ್ಷಾಂತ್ಯಕ್ಕೆ ರು. 83 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಿದ್ದು, ಶೇ.20 ಪ್ರಗತಿ ದಾಖಲಿಸುವ ನಿರೀಕ್ಷೆ ಹೊಂದಿದೆ.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸೋಮವಾರ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್ ಅವರು, ಕಳೆದ ಮಾರ್ಚ್ ಅಂತ್ಯದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
75 ಹೊಸ ಶಾಖೆ ಪ್ರಾರಂಭಿಸಲಿದ್ದು, ದೇಶಾದ್ಯಂತ ಒಟ್ಟು 675 ಶಾಖೆ ಹೊಂದಲಿದ್ದು, 300 ಹೊಸ ಎಟಿಎಂ ಸೇರಿ ಒಟ್ಟು 1 ಸಾವಿರ ಎಟಿಎಂ ಹೊಂದುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಾಲಿನಲ್ಲಿ ಕೃಷಿ ಸಾಲ, ಇತರೆ ರಂಗಗಳಲ್ಲಿ ಹೂಡಿಕೆ, ವಿವಿಧ ಠೇವಣಾತಿ ಮೂಲಕ ಮುಂಗಡ ಮತ್ತು ಆದಾಯ ಹೊಂದುವ ಯೋಜನೆ ಹೊಂದಲಾಗಿದೆ ಎಂದರು. ಸಿಜಿಎಂ ಎಂ.ಎಸ್.ಮಹಾಬಲೇಶ್ವರ ಭಟ್, ಬ್ಯಾಂಕಿನ ಸಾಧನೆಯನ್ನು ಮೆಲುಕು ಹಾಕಿದರು. ಎಸ್ಜಿಎಂಗಳಾದ ಪಿ.ಜಯರಾಮ ಹಂದೆ, ಎಂ.ವಿ.ಸಿ.ಎಸ್.ಕಾರಂತ್, ಡಾ.ಮೀರಾ ಅರ್ಹಾನಾ, ರಘುರಾಮ, ಎಂ.ರಾಘವೇಂದ್ರ ಭಟ್, ಎಜಿಎಂ ರವಿಶಂಕರ್ ಮತ್ತಿತರರಿದ್ದರು.