ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರು: 29ರಂದು ಕಾರ್ಮಿಕರ ಸಮಾವೇಶ

Rashmi Kasaragodu
Updated On : 26 Apr 2014, 12:35 pm

ಮಂಗಳೂರು: ಜನಶಕ್ತಿ ಕಾರ್ಮಿಕ ಸಂಘ ಆಶ್ರಯದಲ್ಲಿ ಕಟ್ಟಡ ನಿರ್ಮಾಣ ಮತ್ತು ಇತರ ವಲಯದ ಕಾರ್ಮಿಕರ ಬೃಹತ್ ಜಿಲ್ಲಾ ಸಮಾವೇಶ 29ರಂದು ಪುರಭವನದಲ್ಲಿ ಜರುಗಲಿದೆ.  ಬೆಳಗ್ಗೆ 10ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.45ಕ್ಕೆ 35ನೇ ವಾರ್ಷಿಕ ಸಭೆ, ಸಂಜೆ 5ಕ್ಕೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಸಾಧಕರಾದ ಡಿ.ಎಂ.ಕುಲಾಲ್, ಉಮೇಶ್ ಸಾಲಿಯಾನ್, ನಾಬಿರಾಜ್, ರಾಬರ್ಟ್ ಕುಲಾಸೋ, ಮೇಘನಾರಿಗೆ ಸನ್ಮಾನ, ಆ ಬಳಿಕ 'ಬಲೇ ತೆಲಿಪುಲೆ' ತುಳು ಹಾಸ್ಯ ಪ್ರಹಸನ ನಡೆಯಲಿದೆ ಎಂದು  ಸಂಘದ ಕಾರ್ಯಾಧ್ಯಕ್ಷ ಅಶೋಕ್ ಕೊಂಚಾಡಿ ಸುದ್ದಿಗಾರರಿಗೆ ತಿಳಿಸಿದರು.


ನಾಳೆ ವಧು ವರಾನ್ವೇಷಣೆ
ಮೂಲ್ಕಿ:  ಬೆಂಗಳೂರಿನ ಬಿಲ್ಲವರ ಅಸೋಸಿಯೇಶನ್ನ ಆಶ್ರಯದಲ್ಲಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದೊಂದಿಗೆ ಏ.27ರಂದು ಬೆಳಗ್ಗೆ ಮೂಲ್ಕಿಯ ಬಿಲ್ಲವ ಸಂಘದ ಶ್ರೀನಾರಾಯಣ ಗುರು ಸಭಾಗ್ರಹದಲ್ಲಿ ವಧು ವರಾನ್ವೇಷಣಾ ಕಾರ್ಯಕ್ರಮ ಜರಗಲಿದೆ. ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಯಧೀಶ್ ಅಮೀನ್ ಕೊಕ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement