ಎಂಜಿನಿಯರಿಂಗ್: 5 ರ್ಯಾಂಕ್
ಮಂಗಳೂರು: ಎಂಟೆಕ್ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಹಾಗೂ ವಾಮಂಜೂರಿನ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.
ಎಂಟೆಕ್ ಥರ್ಮಲ್ ಪವರ್ ಎಂಜಿನಿಯರಿಂಗ್ನಲ್ಲಿ ಶಾರುನ್ ಮೆಂಡೋನ್ಸಾ ಪ್ರಥಮ ಹಾಗೂ ಇಂಡಸ್ಟ್ರಿಯಲ್ ಅಟೋಮೇಷನ್ ಮತ್ತು ರೋಬೋಟಿಕ್ಸ್ನಲ್ಲಿ ಶ್ವೇತಾ ಎನ್. ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ರ್ಯಾಂಕ್ ವಿಜೇತರನ್ನು ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ರಾವ್, ಪ್ರಾಂಶುಪಾಲ ಡಾ.ಶ್ರೀನಿವಾಸ ಮಯ್ಯ ಅಭಿನಂದಿಸಿದ್ದಾರೆ.
ಜೋಸೆಫ್ ಕಾಲೇಜಿಗೆ 3 ರ್ಯಾಂಕ್: ವಾಮಂಜೂರಿನ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿಗೆ ಮೂರು ರ್ಯಾಂಕ್ ಲಭಿಸಿದೆ. ಬಿಇ ಎಲೆಕ್ಟ್ರಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಕಾರ್ತಿಕಾಗೆ 3ನೇ ರ್ಯಾಂಕ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ನಲ್ಲಿ ಮೆವಿದಾ ಸೋನಿ ಕ್ರಾಸ್ತಾಗೆ 3ನೇ ರ್ಯಾಂಕ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ಸ್ ಎಂಜಿನಿಯರಿಂಗ್ನಲ್ಲಿ ಶ್ರೀವತ್ಸ ಉಡುಪ 6ನೇ ರ್ಯಾಂಕ್ ಪಡೆದಿದ್ದಾರೆ.