ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಂತಾವರ: ಸಿಜಿಕೆ ನೆನಪಿನ ನಾಟಕೋತ್ಸವ ಉದ್ಘಾಟನೆ

Rashmi Kasaragodu
Updated On : 27 Apr 2014, 3:25 am

ಕಾರ್ಕಳ: ಜೀವನವೇ ಒಂದು ಕಲೆ. ಕಲೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಯಾವುದೇ ಒಳ್ಳೆಯ ಕೆಲಸವನ್ನು ಪ್ರಯತ್ನಶೀಲರಾಗಿ, ಪ್ರಾಮಾಣಿಕವಾಗಿ ಮಾಡಿದಾಗ ಅದು ಯಶಸ್ವಿಯಾಗುತ್ತದೆ ಎಂದು ರಂಗಭೂಮಿ ಹಾಗೂ ಧಾರ್ಮಿಕ ಕ್ಷೇತ್ರದ ಮುಂದಾಳು, ಧರ್ಮಯೋಗಿ ಮೋಹನ್ ಮುದ್ರಾಡಿ ಹೇಳಿದ್ದಾರೆ. ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ ಆಶ್ರಯದಲ್ಲಿ ಕಾಂತಾವರದ ಚೌಟರ ಚೌಕಿ ಬಯಲು ರಂಗಮಂದಿರಲ್ಲಿ ಎರಡು ದಿನಗಳ ಕಾಲ ನಡೆದ ಸಿಜಿಕೆ ನೆನಪಿನ ನಾಟಕೋತ್ಸವವನ್ನು ತಮಟೆ ಬಾರಿಸುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿಯ ಚಟುವಟಿಕೆಗಳಲ್ಲೂ ಸಾಕಷ್ಟು ಎಡರು ತೊಡರುಗಳಿದ್ದರೂ ಅವುಗಳನ್ನೆಲ್ಲ ಎದುರಿಸಿ ಸಾಧನೆಯಲ್ಲಿ ನಿರತರಾದಾಗ ಯಶಸ್ವಿ ಪ್ರಯೋಗಗಳಾಗುತ್ತವೆ ಎಂದರು. ಅಲ್ಲಮಪ್ರಭು ಪೀಠದ ಕಾರ್ಯಾಧ್ಯಕ್ಷ ಯಶೋಧರ್ ಪಿ. ಕರ್ಕೇರಾ ಅಧ್ಯಕ್ಷತೆ ವಹಿಸಿದ್ದರು. ನಾಟಕೋತ್ಸವ ಸಮಿತಿ ಸಂಚಾಲಕ ನಿಟ್ಟೆ ಮಂಜುನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ. ಮೊಗಸಾಲೆ ಸ್ವಾಗತಿಸಿದರು. ಸುಕುಮಾರ್ ಮೋಹನ್ ವಂದಿಸಿದರು. ನಂತರ ಹೆಗ್ಗೋಡಿನ ಜನಮನದಾಟ ರಂಗ ತಂಡದವರಿಂದ ಮೊದಲ ದಿನ 'ಬದುಕು ಬಯಲು' ಮತ್ತು ಎರಡನೇ ದಿನ 'ಬಾಬಾ ಸಾಹೇಬ್ ಅಂಬೇಡ್ಕರ್' ನಾಟಕಗಳು ಪ್ರದರ್ಶನಗೊಂಡವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement