ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಕ್ಕಳ ಮೋದಿ ಟಿ ಶರ್ಟ್ ತೆಗೆಸಿದ್ದು ರ್ಯಾಲಿಯಿಂದ ಚಿಣ್ಣರ ಮನೆಗೆ ಕಳುಹಿಸಿದ್ದು!

Rashmi Kasaragodu
Updated On : 27 Apr 2014, 3:24 am

ಜಿತೇಂದ್ರ ಕುಂದೇಶ್ವರ
ಮಂಗಳೂರು:  ನರೇಂದ್ರ ಮೋದಿ ಟಿ ಶರ್ಟ್ ಹಾಕೊಂಡವರ ಮೇಲೆ ಕೇಸ್, ಮಕ್ಕಳು ಹಾಕಿದ್ದ ಮೋದಿ ಟಿಶರ್ಟ್ ತೆಗೆಸಿದ್ದು, ರ್ಯಾಲಿಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದು ಈ ಬಾರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರುಗಳ ವೈಶಿಷ್ಟ್ಯ. ದ.ಕ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಎರಡು ಕೇಸ್, ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ವಿರುದ್ಧ 1 ಕೇಸ್ ದಾಖಲಾಗಿದೆ.
ಚುನಾವಣೆ ನೀತಿ ಸಂಹಿತೆ ಅಡಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಆಯೋಗ 166 ದೂರು ಸ್ವೀಕರಿಸಿದೆ. ಬ್ಯಾನರ್ ಹಾಕಿರುವುದು, ಕಾಮಗಾರಿ ನಡೆಸುತ್ತಿರುವುದು, ಮತದಾನಕ್ಕೆ ವಾಹನ ಬಳಸುತ್ತಿರುವುದೇ ಮೊದಲಾದ ಪ್ರಕರಣಗಳಲ್ಲಿ ಎಫ್ಐಆರ್ ಹಾಕಿಲ್ಲ. ಬ್ಯಾನರ್ ತೆಗೆಸುವ, ಕಾಮಗಾರಿ ನಿಲ್ಲಿಸುವಂತೆ ಸೂಚಿಸಲಾಗಿದೆ. ಮತದಾನಕ್ಕೆ ಎಲ್ಲೂ ಖಾಸಗಿ ವಾಹನ ದುರ್ಬಳಕೆ ಮಾಡಿಕೊಂಡ ಕುರಿತು ಕೇಸ್ ದಾಖಲಾಗಿಲ್ಲ. ಹಣ ಸಾಗಾಟ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಮಾ.15ರಂದು ಮೊದಲ ದೂರು ದಾಖಲಾಗಿತ್ತು. ಜನಾರ್ದನ ಪೂಜಾರಿ ವಿರುದ್ಧ ಮಾನಹಾನಿಕರ ಚಿತ್ರ ಮತ್ತು ಸಂದೇಶವನ್ನು ಅಂತರ್ಜಾಲ ಮತ್ತು ವಾಟ್ಸಪ್ನಲ್ಲಿ ಕಳುಹಿಸುತ್ತಿರುವ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ.
ನಳಿನ್ ಕುಮಾರ್ ಕಟೀಲ್ ವಿರುದ್ಧ ಅಂತರ್ಜಾಲ ಮತ್ತು ವಾಟ್ಸಪ್ನಲ್ಲಿ ಮಾನಹಾನಿಕರ ಸಂದೇಶ ಕಳುಹಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ.
ಪೂಜಾರಿ ವಿರುದ್ಧ ಕೇಸ್: ಸ್ವಯಂ ಘೋಷಿತ ಆಸ್ತಿ ತೆರಿಗೆ ಮತು ಘನತ್ಯಾಜ್ಯ ವಿಲೇವಾರಿ ತೆರಿಗೆ ಹೆಚ್ಚಳಕ್ಕೆ ಅವಕಾಶ ನೀಡುವುದಿಲ್ಲ ಎಂಬ ಜನಾರ್ದನ ಪೂಜಾರಿ ಹೇಳಿಕೆ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಕೇಸ್ ಬಂದರು ಠಾಣೆಯಲ್ಲಿ ದಾಖಲು.
ಬ್ರಾಹ್ಮಣ ಮತ್ತು ಗೌಡ ಸಾರಸ್ವತ ಬ್ರಾಹ್ಮಣರಿಗೆ ಮೀಸಲು ನೀಡುವುದಾಗಿ ಜನಾರ್ದನ ಪೂಜಾರಿ ಪುರಭವನದಲ್ಲಿ ಭಾಷಣ ಮಾಡಿದ ಕುರಿತು ದೂರು. ಚುನಾವಣಾಧಿಕಾರಿಯಿಂದ ನೋಟಿಸ್, ಪೂಜಾರಿಯಿಂದ ಚುನಾವಣಾಧಿಕಾರಿಗೆ ಸ್ಪಷ್ಟನೆ ಬಂದ ಕಾರಣ ಕೇಸ್ ದಾಖಲಿಸಿಲ್ಲ.
ನಳಿನ್ ವಿರುದ್ಧ ಕೇಸ್: ಎನ್ಐಟಿಕೆ ಕಾಲೇಜ್ ವಠಾರದಲ್ಲಿ ಅನುಮತಿ ಇಲ್ಲದೆ ಬಿಜೆಪಿ ಅಭ್ಯರ್ಥಿ ನಳಿನ್ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಅನಂತುಕಮಾರ್ ಮತಯಾಚನೆ ಮಾಡಿದ ವಿರುದ್ಧ ಕೇಸ್. ನರೇಂದ್ರ ಮೋದಿಯನ್ನು ಛತ್ರಪತಿ ಶಿವಾಜಿ ಹೋಲಿಸಿ ಕರಪತ್ರ ಹಂಚಿದ ಕುರಿತು ಕಟೀಲ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ.
ಪಾಲೆಮಾರ್ ವಿರುದ್ಧ ಕೇಸ್: ಕೃಷ್ಣಾಪುರ ದೇವಸ್ಥಾನದ ಧಾರ್ಮಿಕ ಸಭೆಯಲ್ಲಿ ರಾಜಕೀಯ ಪ್ರೇರಿತ ಭಾಷಣ ಮಾಡಿದ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ವಿರುದ್ಧ ಕೇಸ್. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೇಸರಿ ಭಗವಾಧ್ವಜ ಹಾಕಿದ ಬಜರಂಗದಳ, ನಮೋ ಭಾರತ್ ಸದಸ್ಯರ ವಿರುದ್ಧ ಕೇಸ್.
ಶುಭಾಶಯಕ್ಕೂ ಕೇಸ್: ಯುಗಾದಿ ಶುಭಾಶಯದಲ್ಲಿ ಧರ್ಮ ಆಧರಿಸಿ ಮತಯಾಚನೆ ಮಾಡಿದ ಕುರಿತು ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್. ಕೋಡಿಕೆರೆಯಲ್ಲಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮತ ಯಾಚನೆಗೆ ಅಡ್ಡಿಪಡಿಸಿದ ಯುವಕರ ವಿರುದ್ಧ ಕೇಸ್.
ಮೊಬೈಲ್ ಬ್ಯಾಂಕ್ ತಡೆ:  ಮತದಾರರಿಗೆ ಆಮಿಷ ಒಡ್ಡುತ್ತಿರುವ ಕುರಿತು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿರುದ್ಧ ದೂರು. ಕ್ರಮ ಕೈಗೊಳ್ಳುವಂತೆ ಕೋ.ಅಪರೇಟಿವ್ ರಿಜಿಸ್ಟ್ರಾರ್ಗೆ ಚುನಾವಣಾಧಿಕಾರಿ ಸೂಚನೆ. ಹಣ ಹಂಚುವ ದೂರಿನ ಹಿನ್ನೆಲೆಯಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ ಮೊಬೈಲ್ ಬ್ಯಾಂಕಿಂಗ್ ಏ.17ರವರೆಗೆ ನಿಲ್ಲಿಸುವಂತೆ ಸೂಚನೆ.
ಕಲ್ಲು, ಸರಾಯಿ, ಪ್ಲ್ಯಾಗ್:  ಬಡಗುಳಪಾಡಿಯಲ್ಲಿ ಕಾಂಗ್ರೆಸ್ ವಕ್ತಾರ ಹರಿಕೃಷ್ಣ ಬಂಟ್ವಾಳ ಭಾಷಣ ಸಂದರ್ಭ ಕಲ್ಲು ತೂರಿದ ಕುರಿತು ಕೇಸ್ ದಾಖಲು. ಹೂಹಾಕುವಕಲ್ಲು ಬಳಿ ಆನುಮತಿ ಪಡೆಯದೆ ಬಿಜೆಪಿ ವಾಹನ ರ್ಯಾಲಿ, ಕೊಣಾಜೆ ಠಾಣೆಯಲ್ಲಿ ಕೇಸ್. ಸುಳ್ಯ ಅಡ್ಯನಡ್ಕದಲ್ಲಿ 22 ಸಾರಾಯಿ ಬಾಟಲು ಪತ್ತೆಯಾದ ಕೇಸ್. ಕಾಂಗ್ರೆಸ್ನ 39 ಪ್ಲ್ಯಾಗ್ ತಲಪಾಡಿ ಚೆಕ್ಪೋಸ್ಟ್ನಲ್ಲಿ ವಶ.  
ಆಪ್ ಮಕ್ಕಳು ಮನೆಗೆ!: ಆಮ್ ಆದ್ಮಿ ಪಾರ್ಟಿ ರ್ಯಾಲಿಯಲ್ಲಿ ಮಕ್ಕಳು ಭಾಗವಹಿಸುತ್ತಿರುವ ಕುರಿತು ದೂರು, ಮಕ್ಕಳನ್ನು ಮನೆಗೆ ಕಳುಹಿಸಿದ ಆಯೋಗ. ಸುರತ್ಕಲ್ನಲ್ಲಿ ಅನುಮತಿ ಪಡೆಯದೆ ಪ್ರಚಾರ ಮಾಡುತ್ತಿದ್ದ ಆಪ್ ವಾಹನ ಮುಟ್ಟುಗೋಲು, ಕೇಸ್ ದಾಖಲು.
ಮೋದಿ ಟೀಶರ್ಟ್ ಕೇಸ್ಗಳು!: ಮತದಾನ ದಿನ ಬೆಳ್ತಂಗಡಿಯಲ್ಲಿ ಮೋದಿ ಟಿಶರ್ಟ್ ಹಾಕಿಕೊಂಡಿದ್ದ ಮಕ್ಕಳಿಗೆ ಎಚ್ಚರಿಕೆ ನೀಡಿದ ಚುನಾವಣೆ ಆಧಿಕಾರಿ, ಟಿಶರ್ಟ್ ತೆಗೆಸಿದರು. ಬಜಪೆ ವಾಮಂಜೂರು ಹಿಂದೂ ಸಮಾಜೋತ್ಸವ ರ್ಯಾಲಿಯಲ್ಲಿ ನರೇಂದ್ರ ಮೋದಿಯವರ ಟಿಶರ್ಟ್ ಧರಿಸಿದ್ದವರ ವಿರುದ್ಧ ಕೇಸ್ ದಾಖಲಿಸಿದರು. ಖಾಸಗಿ ಬಸ್ನಲ್ಲಿ  ಮೋದಿ ಸ್ಟಿಕ್ಕರ್ ಅಂಟಿಸಿದ್ದಕ್ಕೆ ಚಾಲಕ ಮತ್ತು ಕಂಡಕ್ಟರ್ಗೆ  ಚುನಾವಣೆ ಅಧಿಕಾರಿಯಿಂದ ಎಚ್ಚರಿಕೆ, ಸ್ಟಿಕ್ಕರ್ ತೆರವು. ಪುತ್ತೂರು ಮಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಫೋಟೋ ಇದ್ದ 17 ಟಿಶರ್ಟ್ ವಶ ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement