ರಕ್ತವರ್ಗೀಕರಣ ಶಿಬಿರ, ಭಜನೆ, ಯಕ್ಷಗಾನ ಇಂದು
ಉಪ್ಪಿನಂಗಡಿ: ಗೋಳಿತ್ತೊಟ್ಟು ವಿನಾಯಕಬೆಟ್ಟ ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ 27ರಂದು ಉಚಿತ ರಕ್ತವರ್ಗೀಕರಣ ಶಿಬಿರ, ಭಜನಾ ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಮಧ್ಯಾಹ್ನ ಉಚಿತ ರಕ್ತವರ್ಗೀಕರಣ ಶಿಬಿರ ನಡೆಯಲಿದ್ದು, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಶಿಶು ಮಂದಿರದ ಅಧ್ಯಕ್ಷ ನಾರಾಯಣ ನೈಕ್ ಉದ್ಘಾಟಿಸಲಿದ್ದಾರೆ. ಸಂಜೆ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ನಡೆಯುವ ಸಭಾ ಕಾರ್ಯಕ್ರಮವನ್ನು ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ ಉದ್ಘಾಟಿಸಲಿದ್ದಾರೆ. ರಾತ್ರಿ ಗೋಳಿತ್ತೊಟ್ಟು ವಿನಾಯಕ ಬೆಟ್ಟದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಾಚಕೆರೆ ಸರಪಾಡಿ ಇವರಿಂದ 'ಗೆಜ್ಜೆದ ಪೂಜೆ' ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.