ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಾಮೂಹಿಕ ವಿವಾಹ ಇಂದು

Rashmi Kasaragodu
Updated On : 27 Apr 2014, 3:19 am

ಪುತ್ತೂರು: ದ.ಕ. ಜಿಲ್ಲಾ ಮೊಗೇರ ಸಾಮೂಹಿಕ ವಿವಾಹ ವೇದಿಕೆ, ತಾಲೂಕು ಮೊಗೇರ ಸಂಘ, ಮಹಿಳಾ ಮೊಗೇರ ಸಂಘ, ವಿದ್ಯಾರ್ಥಿ ಸಂಘ ಮತ್ತು ಯುವ ವೇದಿಕೆ ವತಿಯಿಂದ 27ರಂದು ಪುತ್ತೂರು ಪುರಭವನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುತ್ತೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ ಅಧ್ಯಕ್ಷತೆಯಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಪುನರೂರು ಬ್ರಹ್ಮಮೊಗೇರ ಮಹಾಕಾಳಿ ದೈವಸ್ಥಾನದ ಅರ್ಚಕ ರಘುರಾಮ ಪುನರೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಜಿಪಂ, ತಾಪಂ, ಪುರಸಭೆ ಹಾಗೂ ಗ್ರಾಪಂನ ಮೊಗೇರ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಗುವುದು. ವಿವಾಹದಲ್ಲಿ ಭಾಗವಹಿಸುವ ವಧು ವರರಿಗೆ ಚಿನ್ನದ ತಾಳಿ, ಬೆಳ್ಳಿ ಕರಿಮಣಿ, ಸೀರೆ, ರವಿಕೆ ಪೀಸ್, ಲಂಗ ಮತ್ತು ಕಾಲುಂಗುರ ನೀಡಲಾಗುವುದು. ವರನಿಗೆ ಧೋತಿ, ಶಾಲು, ಪೇಟ ಮತ್ತು ಶರ್ಟ್ ಪೀಸ್ ನೀಡಲಾಗುವುದು ಎಂದು ತಿಳಿಸಿದರು. ಎರಡನೇ ಮದುವೆಗೆ ಅವಕಾಶವಿಲ್ಲ. ಮದುವೆಗೆ ಅರ್ಜಿ ಹಾಕುವವರು ಜಾತಿ ಮತ್ತು ವಯಸ್ಸಿನ ದೃಢೀಕರಣ ಕಡ್ಡಾಯವಾಗಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಗೌರವಾಧ್ಯಕ್ಷ ಕೆ. ಕುಮಾರ್ ತಿಳಿಸಿದ್ದಾರೆ.


ಅಧಿಕ ಮತದಾನದಿಂದ ಲಾಭ: ಶಕುಂತಳಾ ಶೆಟ್ಟಿ



ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 79 ಮತದಾನವಾಗಿತ್ತು. ಆ ಸಂದರ್ಭದಲ್ಲಿ ಬಿಜೆಪಿಯವರಿಗೆ ಬಹಳ ಸಂತೋಷವೂ ಆಗಿತ್ತು. ಶಕುಂತಳಾ ಶೆಟ್ಟಿ ಈ ಬಾರಿ ಖಂಡಿತಾ ಸೋಲುತ್ತಾರೆ ಹೆಚ್ಚು ಮತದಾನವಾಗಿದ್ದರಿಂದ ಬಿಜೆಪಿ ಗೆಲ್ಲುತ್ತದೆ ಎಂದು ಲೆಕ್ಕಾಚಾರ ಮಾಡಿದ್ದರು. ಆದರೆ ಮತದಾರನ ತೀರ್ಪು ಕಾಂಗ್ರೆಸ್ ಪರವಾಗಿತ್ತು. ಅದೇ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಮತದಾನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಗೆಲ್ಲುತ್ತಾರೆ. ಇದರಲ್ಲಿ ಯಾವ ಸಂಶಯವೂ ಬೇಡ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಅವರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ನ ನಿಕಟಪೂರ್ವಾಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಪಕ್ಷದ ಪ್ರಮುಖರಾದ ಸೂತ್ರಬೆಟ್ಟು ಜಗನ್ನಾಥ್ ರೈ. ಜೋಕಿಂ ಡಿಸೋಜಾ, ವಕೀಲ ಫಝಲ್ ರಹೀಂ, ಅರ್ಶದ್ ದರ್ಬೆ, ಮಹಮ್ಮದ್ ಬಡಗನ್ನೂರು, ಕಮಲ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement