ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಜೆಪಿಗೆ ಸೋಲಿನ ವಾಸನೆ: ವೆಂಕಪ್ಪ ಗೌಡ

Rashmi Kasaragodu
Updated On : 30 Apr 2014, 12:58 pm

ಸುಳ್ಯ: ಶಾಸಕ ಅಂಗಾರ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ತೆಗಳುವ ಕೆಲಸದಲ್ಲಿ ನಿರತರಾಗಿರುವುದನ್ನು ನೋಡಿದಾಗ ಸುಳ್ಯದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಸೋಲಿನ ವಾಸನೆ ಸಿಕ್ಕಿದೆ ಎಂಬುದು ಸ್ಪಷ್ಟವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ತಿಳಿಸಿದ್ದಾರೆ.
 ಎಡಮಂಗಲದಲ್ಲಿ  ಗಲಾಟೆ, ನಾರ್ಣಕಜೆ ಬೂತ್ ಹಾಗೂ ಮರ್ಕಂಜದ ಮಿತ್ತಡ್ಕ ಬೂತ್‌ಗಳಲ್ಲಿ ಕೂಡಾ ಬಿಜೆಪಿ ಕಾರ್ಯಕರ್ತರು ತಮ್ಮ ಮೃಗೀಯ ಸ್ವಭಾವವನ್ನು ತೋರಿರುವುದು ಕಂಡಾಗ ಮೋದಿ ಮಾದರಿ ಆಡಳಿತ ಸುಳ್ಯದಲ್ಲಿಯೂ ಇದೆ. ಇಂತಹ ಘಟನೆಗಳು ಮರುಕಳಿಸುವುದು ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗಿದಂತಾಗುತ್ತದೆ ಎಂದು ಶಾಸಕರು ಹಾಗೂ ಬಿಜೆಪಿ ಅಧ್ಯಕ್ಷರ ತಿಳಿದುಕೊಳ್ಳದಿರುವುದು ಅವರ ರಾಜಕೀಯ ಅವಿವೇಕಿತನ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement