ಮಂಗಳೂರು: ವಿದ್ಯುತ್ ನಿಲುಗಡೆ ಇಂದು
ಮಂಗಳೂರು: 33 ಕೆವಿ ಕಾವೂರು-ಮಣ್ಣಗುಡ್ಡ ಫೀಡರ್ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ, ಜಂಪರ್ ಸರಿಪಡಿಸುವ ಹಾಗೂ ಟ್ರೀ ಕಟ್ಟಿಂಗ್ ಕಾಮಗಾರಿ ಏ.30ರಂದು ನಡೆಯಲಿದೆ.
ಆದ್ದರಿಂದ ಮಣ್ಣಗುಡ್ಡ ಮತ್ತು ಕುದ್ರೋಳಿ ಉಪಕೇಂದ್ರದಿಂದ ಹೊರಡುವ ಎಲ್ಲ ಫೀಡರ್ಗಳಲ್ಲಿ ಹಾಗೂ 110/33 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಪಂಪ್ವೆಲ್, ಅಡ್ಯಾರ್, ಎಕ್ಕೂರು ಹಾಗೂ ಜೆಪ್ಪಿನಮೊಗರು ಫೀಡರ್ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಕೊಟ್ಟಾರ, ಕೋಡಿಕಲ್, ಉರ್ವಸ್ಟೋರ್, ಕುದ್ರೋಳಿ, ಅಳಕೆ, ಕೋಡಿಯಾಲಬೈಲ್, ಚಿಲಿಂಬಿ, ಮಣ್ಣಗುಡ್ಡ, ಉರ್ವ, ಉರ್ವ ಮಾರ್ಕೆಟ್, ಬೋಳೂರು, ಮಠದಕಣಿ, ಲಾಲ್ಭಾಗ್, ಬಳ್ಳಾಲ್ಭಾಗ್, ಅಶೋಕನಗರ, ದಂಬೆಲ್, ಹೊಯ್ಗೆಬಜಾರ್, ಲೇಡಿಹಿಲ್, ಎಂ.ಜಿರೋಡ್, ಕೊಡಿಯಾಲಗುತ್ತು, ಹ್ಯಾಟ್ಹಿಲ್, ಬೊಕ್ಕಪಟ್ಣ, ಪಂಪ್ವೆಲ್, ಮರೋಳಿ, ಪ್ರಶಾಂತ್ಭಾಗ್, ಪಡೀಲ್, ಬಜಾಲ್, ನಾಗುರಿ, ಎಕ್ಕೂರು, ಜೆಪ್ಪಿನಮೊಗರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.