ಸಿಡಿಲಿಗೆ ಐವರ ಸಾವು
ಮಂಗಳೂರು/ಬಳ್ಳಾರಿ/ಹೊನ್ನಾಳಿ: ಸಿಡಿಲಿನ ಆರ್ಭಟಕ್ಕೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು, ಶಿವಮೊಗ್ಗ ಜಿಲ್ಲೆಯಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಓರ್ವ ಬಲಿಯಾಗಿದ್ದಾರೆ.
ಮೂಡುಬಿದರೆ ಕೆಲ್ಲಪುತ್ತಿಗೆ ಬಳಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಮಾಡುತ್ತಿದ್ದ ವೇಳೆ ಅಳಿಯೂರು ನಿವಾಸಿ ದಿನೇಶ್(30) ಮತ್ತು ಗಂಗಾಧರ್ ಮೃತಪಟ್ಟಿದ್ದಾರೆ. ಸುಳ್ಯದಲ್ಲಿ ಸೋಮವಾರ ರಾತ್ರಿ ಸಿಡಿಲ ಆಘಾತಕ್ಕೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪಾಜೆಯ ಜೂನಿಯರ್ ಕಾಲೇಜಿನ ನಿವೃತ್ತ ಕ್ಲರ್ಕ್ ಲಿಂಗಪ್ಪ(70) ಮಂಗಳವಾರ ನಿಧನರಾದರು. ಅಡವಿಯಲ್ಲಿ ಮೇಕೆ ಮೇಯಿಸುತ್ತಿದ್ದಾಗ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ಕೃಷ್ಣಮೂರ್ತಿ ನಾಗರಾಜ ಹರಿಜನ(14) ಹಾಗೂ ಶಿವಮೊಗ್ಗದ ಕೂಲಿ ಕಾರ್ಮಿಕ ಸಾರಂಧರ(65) ಗೊಂಧಿ ಚಟ್ನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.