ಕರಡಿ ದಾಳಿ, ವ್ಯಕ್ತಿಗೆ ತೀವ್ರ ಗಾಯ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಕಲ್ಲುಸಾದರಹಳ್ಳಿ ಗ್ರಾಮದಲ್ಲಿ ರೈತನೊಬ್ಬ ತೋಟಕ್ಕೆ ಹೊಗುತ್ತಿದ್ದ ವೇಳೆ ಕರಡಿಯೊಂದು ಹಠಾತ್ತನೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಗ್ರಾಮದ ತಿಮ್ಮಪ್ಪ ಎಂಬುವರ ಮಗ ನಾಗರಾಜು(50) ಗಾಯಗೊಂಡವರು. ಇವರು ಮುಂಜಾನೆ ಎಂದಿನಂತೆ ತೋಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿದ್ದ ಕರಡಿಯೊಂದು ದಿಢೀರನೆ ಮೇಲೆರಗಿ ಉಗುರುಗಳಿಂದ ತಲೆ, ಮುಖ, ಕಿವಿಗಳನ್ನು ಪರಚಿದೆ ಹಾಗೂ ಪಕ್ಕೆ, ಕೈ, ಕಾಲು, ಹೊಟ್ಟೆಯ ಭಾಗವನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯಿಂದ ಗಾಬರಿಗೊಂಡ ಇವರು ಸಹಾಯಕ್ಕಾಗಿ ಕೂಗಿಕೊಂಡಾಗ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಆಗಮಿಸಿ ಬೆದರಿಸಿದಾಗ ಕರಡಿ ಅಲ್ಲಿಂದ ಪರಾರಿಯಾಗಿದೆ.