ಗುಡ್ಡ ಕುಸಿದು ಕಾರ್ಮಿಕ ಸಾವು
ಮಂಗಳೂರು: ದೇರೇಬೈಲ್ ಬಳಿ ನಿರ್ಮಾಣ ಹಂತದ ಕಟ್ಟಡ ಹಿಂಭಾಗದ ಗುಡ್ಡ ಕುಸಿದು ಕಾರ್ಮಿಕ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಬಾದಾಮಿ ನರಗುಂದ ನಿವಾಸಿ ಕಾಶಿಯಪ್ಪ (40) ಮೃತರು. ಹಂಪಿ ಮೂಲದ ಶಿವನಾಯಕ್ (21), ಸ್ವಾಮಿ ನಾಯಕ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಶಿಯಪ್ಪನ ಪತ್ನಿ ಮಹಾದೇವಿಗೂ ಸಣ್ಣಪುಟ್ಟ ಗಾಯವಾಗಿದೆ. ಕಾರ್ಮಿಕರು ಬುಧವಾರ ಮಧ್ಯಾಹ್ನ ವಿಕ್ಟೋರಿಯಾ ಬಿಲ್ಡರ್ಸ್ಗೆ ಸೇರಿದ ಸೈಟ್ನಲ್ಲಿ ಹೊಂಡ ತೋಡುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಗೋಡೆ ಮೇಲೆ ಬಿದ್ದಿದೆ. ಗೋಡೆ ಮಣ್ಣು ಸಹಿತ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಕಾಶಿಯಪ್ಪ ಹೊಂಡದೊಳಕ್ಕೆ ಬಿದ್ದಿದ್ದು, ಮಣ್ಣಲ್ಲಿ ಹೂತು ಹೋಗಿ ಮೃತಪಟ್ಟರು.