ವೃದ್ಧನ ಕಡಿದು ಕೊಲೆ
ಮಂಗಳೂರು: ಮೂಡುಬಿದಿರೆ ಪಡುಕೊಣಾಜೆಯ ನೂಯಿ ದರ್ಖಾಸಿನಲ್ಲಿ ದನ ಮೇಯಿಸುತ್ತಿದ್ದ ವೃದ್ಧನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಹಾಸನ ಮೂಲದ ಸಂಜೀವ ಪೂಜಾರಿ (70) ಕೊಲೆಯಾದವರು. ಸಂಜೀವರು ಪಡುಕೊಣಾಜೆಯ ಅಳಿಯ ಶೇಖರ ಪೂಜಾರಿ ಮನೆಯಲ್ಲಿ ಮೂರು ವರ್ಷದಿಂದ ವಾಸಿಸುತ್ತಿದ್ದರು. ಎಂದಿನಂತೆ ನೂಯಿ ದರ್ಖಾಸಿಗೆ ದನ ಮೇಯಿಸಲು ಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ ತಂದೆ ಮನೆಗೆ ಬಾರದಿರುವುದನ್ನು ಮಗಳು ಜಯಂತಿ ತನ್ನ ಗಂಡನ ಬಳಿ ವಿಚಾರ ತಿಳಿಸಿದ್ದಾರೆ. ದರ್ಖಾಸಿಗೆ ಹೋಗಿ ನೋಡಿದಾಗ ಸಂಜೀವ ಪೂಜಾರಿ ದೇಹ ರಕ್ತ ಸಿಕ್ತವಾಗಿತ್ತು.
ಮನೆಗೆ ನುಗ್ಗಿ ಹಲ್ಲೆ: ಇದೇ ದರ್ಖಾಸ್ನ ಇನ್ನೊಂದೆಡೆ ಉರ್ಪಲ್ ಪಾದೆಯಲ್ಲಿ ಬುಧವಾರ ಬೆಳಗ್ಗೆ ಸುಲೈಮಾನ್ ಎಂಬವರ ಮನೆಗೆ ನುಗ್ಗಿದ ವ್ಯಕ್ತಿ ಪತ್ನಿ ಬೀಪಾತುಮ್ಮ ಎಂಬವರ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾದ ಬೀಪಾತುಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಲ್ಲೆಗೂ ಸಂಜೀವ ಪೂಜಾರಿ ಕೊಲೆಗೆ ಸಂಬಂಧ ಇದೆಯೋ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.