ಸಂಶಯಾಸ್ಪದವಾಗಿ ಓಡುತ್ತಿದ್ದಾಗ ಗುಂಡು ಹೊಡೆದರು: ಚಾಲಕ
ವಿಶೇಷ ವರದಿ
ಮಂಗಳೂರು: ನಕ್ಸಲರು ಪ್ರಯಾಣಿಕರಿಂದ ಹಣ ದೋಚಿದ್ದಾರೆ ಎಂದು ಎಎನ್ಎಫ್ಗೆ ಮಾಹಿತಿ ಬಂದ ಸ್ವಲ್ಪ ಹೊತ್ತಿನ ಬಳಿಕ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ತನಿಕೋಡು ಚೆಕ್ ಪೋಸ್ಟ್ಗೆ ಬಂದಿದೆ. ಚೆಕ್ ಪೋಸ್ಟ್ ಬಳಿ ಮಾಮೂಲಿ ನೀಡಿ ಚೀಟಿ ಪಡೆಯಲು ಪಿಕಪ್ನಿಂದ ಇಳಿದು ಹೋದ ರಫೀಕ್ ಎಎನ್ಎಫ್ ಸಿಬ್ಬಂದಿಯನ್ನು ನೋಡಿ ಬೆದರಿ ಚೀಟಿ ಪಡೆಯದೆ, ನೇರವಾಗಿ ನಡೆದೇ ಚೆಕ್ ಪೋಸ್ಟ್ ದಾಟಿದ. ಇದನ್ನು ನೋಡಿ ಸರ್ಫ್ರಾಜ್ ಮತ್ತು ಚಾಲಕ ಪ್ರಮೋದ್ ರಾಂಗ್ ಸೈಡ್ನಿಂದ ಇಳಿದು ಓಡಿದ್ದಾರೆ.
ಇದನ್ನು ನೋಡಿದ ಎಎನ್ಎಫ್ನ ನವೀನ್ ನಾಯ್ಕ್ಗೆ ನಕ್ಸಲರೇ ದಾಳಿಗೆ ಬಂದಿದ್ದಾರೆ ಎಂಬ ಭಾವನೆ ಮೂಡಿದೆ. ಈ ವೇಳೆ ವಾಹನದ ಹಿಂಭಾಗದಲ್ಲಿದ್ದ ಕಬೀರ್, ಹೊರಕ್ಕೆ ಬೊಬ್ಬೆ ಹೊಡೆಯುತ್ತ ಓಡಲಾರಂಭಿಸದ ಆಗ ನವೀನ್ ನಾಯ್ಕ ಗುಂಡು ಹಾರಿಸಿದರು. ಸೆಮಿ ಅಟೋಮ್ಯಾಟಿಕ್ ಮೋಡ್ನಲ್ಲಿದ್ದ ರೈಫಲ್ನಿಂದ ಸಿಡಿದ ಎರಡು ಗುಂಡು ಬೆನ್ನಿಗೆ ತಾಗಿ ಎದೆಯಿಂದ ಹೊರ ಬಂದಿದೆ. ಇನ್ನೊಂದು ಕೈಗೆ ಹೊಡೆದಿದೆ....
ಇದು ಏ.19ರಂದು ಬೆಳಗ್ಗಿನ ಜಾವ 3.30ಕ್ಕೆ ತನಿಕೋಡು ಚಕ್ಪೋಸ್ಟ್ ಬಳಿ ನಡೆದ ಶೂಟೌಟ್ನ ಪ್ರತ್ಯಕ್ಷದರ್ಶಿ ದನ ಸಾಗಾಟ ವಾಹನ ಚಾಲಕ ಪ್ರಮೋದ್ ಪೂಜಾರಿ ಹೇಳಿಕೆ ಮತ್ತು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಸಿಐಡಿ ಮುಂದೆ ಎಎನ್ಎಫ್ ಸಿಬ್ಬಂದಿ ನವೀನ್ ನೀಡಿರುವ ಹೇಳಿಕೆಗಳಿಂದ ಘಟನೆ ಚಿತ್ರಣ ಹೊರಬಂದಿದೆ.