ಸುದ್ದಿ ಸಂಕ್ಷೇಪ
'ನೀರಾತಂಕ' ಸಂಖ್ಯೆಗೆ ಒಂದೇ ದಿನ 4400 ಕರೆ
ಬೆಳಗಾವಿ: ಕುಡಿವ ನೀರಿನ ಸಮಸ್ಯೆ ಅರಿಯಲು ಹಾಗೂ ಪರಿಹರಿಸಲು ಕಲ್ಪಿಸಲಾಗಿದ್ದ ಶುಲ್ಕ ರಹಿತ(ಟೋಲ್ ಫ್ರೀ) ದೂರವಾಣಿಗೆ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೇ ದಿನದಲ್ಲಿ 4400 ಕರೆಗಳು ದಾಖಲಾಗಿವೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ಆರು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ ಈ ವಿಷಯ ತಿಳಿಸಿದರು. ಕೆಲವೊಂದು ಗ್ರಾಮಗಳಲ್ಲಿ ಟ್ಯಾಂಕರ್ ನೀರು ಪೂರೈಕೆಯಲ್ಲಿ ಸಾಕಷ್ಟು ದೂರುಗಳ ಬಂದಿರುವ ಹಿನ್ನೆಲೆಯಲ್ಲಿ ಕುಡಿವ ನೀರು ಪೂರೈಕೆ ಮಾಡುವ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಸಲು ಆದೇಶ ನೀಡಲಾಗಿದೆ.
ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ
ಮೈಸೂರು: ರಂಗವಾಹಿನಿ ಸಂಸ್ಥೆಯು ದಲಿತ ಸಾಹಿತಿ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಕವನ ಸಂಕಲನಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಕವನ ಸಂಕಲನ 2013ನೇ ಸಾಲಿನಲ್ಲಿ ಪ್ರಕಟಗೊಂಡಿರಬೇಕು. ತೀರ್ಪುಗಾರರ ತೀರ್ಮಾನವೆ ಅಂತಿಮ. ಮೇ 15ರ ಒಳಗೆ ಕವನ ಸಂಕಲನದ 3 ಪ್ರತಿಗಳನ್ನು ಸಿ.ಎಂ. ನರಸಿಂಹಮೂರ್ತಿ, ಅಧ್ಯಕ್ಷರು, ರಂಗವಾಹಿನಿ, ಬಣ್ಣದ ಮನೆ, ಬಿಎಸ್ಎನ್ಎಲ್ ಕಚೇರಿ ಎದುರು, ರಾಮಸಮುದ್ರ, ಚಾಮರಾಜನಗರ- 571342 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9916115263 ಸಂಪರ್ಕಿಸಬಹುದು. ಪ್ರಶಸ್ತಿಯನ್ನು ಮೇ 25 ರಂದು ನಂಜನಗೂಡಿನಲ್ಲಿ ಏರ್ಪಡಿಸುವ ಸಾಹಿತ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ತಿಳಿಸಿದ್ದಾರೆ.