ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಟೆಂಪೋ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು, ಏಳು ಮಂದಿ ಗಂಭೀರ

Vishwanath S
Updated On : 2 Feb 2014, 12:16 pm

ಉಪ್ಪಿನಂಗಡಿ: ಸರಕು ಸಾಗಾಟದ ಟೆಂಪೋ ಮಗುಚಿ ಬಿದ್ದ ಪರಿಣಾಮ ಟೆಂಪೋದಲ್ಲಿದ್ದ ಇಬ್ಬರು ಮೃತಪಟ್ಟು, ಇತರ 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಉದನೆಯ ಎಂಜಿರ ಎಂಬಲ್ಲಿ ರಾ.ಹೆ.75ರಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಮೃತರನ್ನು ಬಿಹಾರ ಮೂಲದವರು ಎನ್ನಲಾದ ಖಲೀಮುಲ್ಲ (28) ಮತ್ತು ನಹೀಂ (28) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಬೆಂಗಳೂರು ಶ್ರೀರಾಂಪುರ ನಿವಾಸಿಗಳಾದ ಶರವಣ ಎಂ., ವಿನೋದ್, ಅರುಣ್, ರಾಜು, ಶರವಣ ಆರ್., ಅರುಣ್ ಹಾಗೂ ಟೆಂಪೋ ಚಾಲಕ ಮುಝಪೀರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದಕ್ಕೆ ಬೆಂಗಳೂರಿನಿಂದ 'ಶೋ ಅಪೆಕ್ಸ್‌' ಸಂಸ್ಥೆಯ ವೇದಿಕೆ ನಿರ್ಮಾಣ ಸಾಮಗ್ರಿ, ಅಲಂಕಾರ ಸಾಮಗ್ರಿ ಮತ್ತು ಫ್ಲೆಕ್ಸ್ ಮತ್ತು ಬೋರ್ಡ್‌ಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿ ಬಿತ್ತು. ಈ ವೇಳೆ ಟೆಂಪೋ ಹಿಂಭಾಗದಲ್ಲಿ ನಿದ್ರಿಸುತ್ತಿದ್ದ ಖಲೀಮುಲ್ಲ ಮತ್ತು ನಹೀಂ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಅಸುನೀಗಿದರು. ಚಾಲಕ ಮುಜಾಫಿರ್, ವಿನೋದ್, ಅರುಣ್ ಮುಂಭಾಗದಲ್ಲಿದ್ದರೆ, ಉಳಿದವರೆಲ್ಲ ಹಿಂಭಾಗದಲ್ಲಿ ಕುಳಿತಿದ್ದರು ಎನ್ನಲಾಗಿದೆ. ಘಟನೆ ನಡೆದ ಕೂಡಲೆ ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಪುತ್ತೂರು ಸಂಚಾರಿ ಠಾಣೆ ಎಸ್‌ಐ ರಕ್ಷಿತ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement