ಬಸ್- ಬೈಕ್ ಡಿಕ್ಕಿ: ಸವಾರ ಸಾವು
ಕಾಪು: ಮೂಡಬೆಟ್ಟು ಗ್ರಾಮದ ಕಂಬಳ ಬಳಿ ಬಸ್ ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಸುಧೀರ್ ಶೆಟ್ಟಿ ಮೃತರು. ಅವರು ಮಹೇಶ ಎಂಬವರನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಕಟಪಾಡಿಯಿಂದ ಕಾಪು ಕಡೆಗೆ ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬಸ್ ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಬಸ್, ಬೈಕ್‌ಗೆ ಡಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ಸಮೇತ ರಸ್ತೆ ಬಿದ್ದ ಸುಧೀರ್ ಶೆಟ್ಟಿ ಮತ್ತು ಮಹೇಶ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸುಧೀರ್ ಶೆಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಭುಜಂಗ ಶೆಟ್ಟಿ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
ಮದ್ಯ ಅಕ್ರಮ ಮಾರಾಟ: ಓರ್ವ ಸೆರೆ
ಬೆಳ್ತಂಗಡಿ: ಮಲವಂತಿಗೆ ದಿಡುಪೆ ಎಂಬಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೆಳ್ತಂಗಡಿ ಅಬಕಾರಿ ಪೊಲೀಸರು ಬಂಧಿಸಿ, 6.480 ಲೀ. ಮದ್ಯ ವಶಪಡಿಸಿದ್ದಾರೆ. ಬಂಧಿತನನ್ನು ದಿಡುಪೆಯ ಡೀಕಯ್ಯ ಗೌಡ ಬಿನ್ ಅಣ್ಣು ಗೌಡ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕ ಅಶೋಕ್ ಎಚ್., ಉಪ ನಿರೀಕ್ಷಕ ತುಕರಾಮ, ಅಬಕಾರಿ ರಕ್ಷಕರಾದ ಸೈಯದ್ ಶಬೀರ್, ಅಬ್ದುಲ್ ಹಮೀದ್, ಬೋರ, ಸಂಜೀವ ನಾಯ್ಕ್ ಭಾಗವಹಿಸಿದ್ದರು.