ಮಂಗಳೂರು ಪ್ರೀತಿಸಿ, ರಕ್ಷಿಸಲು ಸಹಿ ಬೆಂಬಲ
ಮಂಗಳೂರು: ಅದ್ವೈತ ಹುಂಡೈ ಸಹಕಾರದಲ್ಲಿ 92.7 ಬಿಗ್ ಎಫ್ಎಂ ಮಂಗಳೂರು ಆಯೋಜಿಸಿದ ಬಿಗ್ ಎಂಐಸಿ ಕಾರ್ಯಕ್ರಮ ಸಮಾರೋಪ ನಗರದ ಭರತ್ ಮಾಲ್ನಲ್ಲಿ ನಡೆಯಿತು. 'ಮಂಗಳೂರನ್ನು ಪ್ರೀತಿಸಿ ಮತ್ತು ರಕ್ಷಿಸಿ' ಧ್ಯೇಯ ವಾಕ್ಯಕ್ಕೆ ಸಿನಿಮಾ ನಟರು, ನಾಗರಿಕರು ಸಹಿ ಹಾಕಿ ಬೆಂಬಲ ವ್ಯಕ್ತಪಡಿಸಿದರು.
ಕರಾವಳಿಯ ಜನರ ಅವಶ್ಯಕತೆಗೆ ಸ್ಪಂದಿಸುವ ಸಲುವಾಗಿ ಬಿಗ್ ಎಫ್ಎಂ ತಂಡ ನಗರದ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಮಂಗಳೂರಿನ ಅಭಿವೃದ್ಧಿಗೆ ಸಲಹೆ, ಸೂಚನೆ ಪಡೆಯಿತು. ಇದನ್ನು ಶೀಘ್ರವೇ ಜಿಲ್ಲಾಧಿಕಾರಿಗೆ ಸಲ್ಲಿಸಲಿದೆ. ಒರಿಯರ್ದೊರಿ ಅಸಲ್ ಚಿತ್ರದ ನಟ ಲಿಖಿತ್ ಶೆಟ್ಟಿ ಆಗಮಿಸಿ, ಸ್ವಚ್ಛ ಮತ್ತು ಹಸಿರು ನಗರವಾಗಿ ಮಂಗಳೂರನ್ನು ಉಳಿಸುವಂತೆ ಕಳಕಳಿ ವ್ಯಕ್ತಪಡಿಸಿದರು. ನಟಿ ಯಜ್ಞ ಶೆಟ್ಟಿ ಮಾತನಾಡಿ, ನಗರದ ಅಭಿವೃದ್ಧಿಗೆ ಜನತೆಯ ಸಹಕಾರ ಬಯಸಿದರು. ಬಿಗ್ ಎಫ್ಎಂ ಆರ್ಜೆ ಎರೋಲ್, ವರ್ಷಾ, ಆಸ್ಟನ್ ಸಿಕ್ವೇರಾ ಇದ್ದರು.