ವೇಯ್ಟ್ ಲಿಫ್ಟಿಂಗ್; ಶಿರ್ವದ ರಕ್ಷಿತ್ 'ಮಿಸ್ಟರ್ ಮಂಗಳೂರು ವಿವಿ'
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿವಿ ಮಟ್ಟದ ಕಾಲೇಜುಗಳ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ರಕ್ಷಿತ್ 2013-14ನೇ ಸಾಲಿನ 'ಮಿಸ್ಟರ್ ಮಂಗಳೂರು ವಿವಿ'ಯಾಗಿ ಆಯ್ಕೆಯಾದರು.
ಈ ಕ್ರೀಡಾಕೂಟದ ಪುರುಷರ ಭಾರ ಎತ್ತುವ ಸ್ಪಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಉಜಿರೆ ಎಸ್ಡಿಎಂ ಮತ್ತು ದ್ವಿತೀಯ ಪ್ರಶಸ್ತಿಯನ್ನು ಮೂಡುಬಿದಿರೆ ಆಳ್ವಾಸ್ ಕಾಲೇಜು ಪಡೆಯಿತು. ಭಾರ ಎತ್ತುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಮತ್ತು ದ್ವಿತೀಯ ಪ್ರಶಸ್ತಿಯನ್ನು ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಪಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ಜೆರಾಲ್ಡ್ ಡಿಸೋಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯಾ ಬ್ಯಾಂಕ್ನ ಚೆನ್ನೈನ ಪ್ರಧಾನ ಪ್ರಬಂಧಕ ಬ್ಯಾಪ್ಟಿಸ್ಟ್ ಲೋಬೋ ಪಾಲ್ಗೊಂಡಿದ್ದರು. ಏಕಲವ್ಯ ಪ್ರಶಸ್ತಿ ವಿಜೇತ ಶ್ರೀಧರ ಗೌಡ, ಉತ್ತಮ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಎಚ್.ಜೆ. ಉಮೇಶ್ ಇದ್ದರು.