ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಸೂಕ್ತ ಅನುದಾನ: ಚಂದ್ರಹಾಸ ರೈ

Mainashree
Updated On : 4 Feb 2014, 10:17 am

ಮಂಗಳೂರು: ಗ್ರಾಮೀಣ, ನಗರ ಪ್ರದೇಶದಲ್ಲಿರುವ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೂಕ್ತ ಅನುದಾನ ನೀಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ ಹೇಳಿದ್ದಾರೆ.
ಕೊಲ್ಯ ನಾಟ್ಯ ನಿಕೇತನ ನೃತ್ಯ ಶಿಕ್ಷಣ ಕೇಂದ್ರದಿಂದ ಸೋಮವಾರ ಪುರಭವನದಲ್ಲಿ ನಡೆದ 57ನೇ ವರ್ಷದ ನಾಟ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಧಿಕಾರಿಗಳ ಸಭೆಯಲ್ಲಿ, ಸೂಕ್ತ ಕಲಾವಿದರನ್ನು ಗುರುತಿಸಿ, ಇಲಾಖೆಯಿಂದ ನೆರವು ನೀಡುವಲ್ಲಿ ಕಾರ್ಯಾಚರಿಸುವಂತೆ ಸಲಹೆ ನೀಡಿದ್ದಾರೆ. ಕಲಾವಿದರು ದಾಖಲೆ ನೀಡಿ ಅನುದಾನ ಪಡೆದುಕೊಳ್ಳಬಹುದು ಎಂದರು.
ಇದೇ ಸಂದರ್ಭ ನಾಟ್ಯ ನಿಕೇತನ ಮ್ಯಾನೇಜಿಂಗ್ ಟ್ರಸ್ಟಿ ಉಳ್ಳಾಲ ಮೋಹನ್ ಕುಮಾರ್ ಮತ್ತು ಅವರ ಪತ್ನಿ ಸಬಿತಾ ಅವರನ್ನು ಸನ್ಮಾನಿಸಲಾಯಿತು. ವಿದುಷಿ ಚಂದ್ರಿಕಾ ಕುಂಜತ್ತೂರು ಹಾಗೂ ವಿಜಯ್ ಮಂಜೇಶ್ವರ ಇವರಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾಟ್ಯ ಕಲಾಶಾಲೆಯ ಮಕ್ಕಳಿಂದ ವಿವಿಧ ಭರತನಾಟ್ಯ ನೃತ್ಯ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಉಪಕಾರ್ಯದರ್ಶಿ ಎಚ್.ವಿ. ರಾಮಚಂದ್ರ ರಾವ್, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ, ಕೆಎಂಸಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ. ಚಕ್ರಪಾಣಿ, ಕಲಾಪೋಷಕ ಬಿ. ದಯಾನಂದ ಪೈ ಕುಂಬ್ಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement