ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 4 Feb 2014, 10:17 am

ಇಂದು ಪಿಎಫ್‌ಐ ಪ್ರವಾದಿ ಸಂದೇಶ
ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಸಮೀಪದ ತಲಪಾಡಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಫೆ.3ರಂದು ಸಂಜೆ ಪ್ರವಾದಿ ಸಂದೇಶ ಕಾರ್ಯಕ್ರಮ ನಡೆಯಲಿದೆ.
ಉಚಿತ ತಪಾಸಣೆಬೀದಿ ನಾಟಕ
ಮಂಗಳೂರು: ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಭಾರತೀಯ ರೇಲ್ವೆ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಫೆ.4ರಂದು ಬಾಯಿ ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ಬೀದಿ ನಾಟಕ ನಡೆಸಲಿದೆ. ಅತ್ತಾವರ ಐಎಂಎ ಹಾಲ್‌ನಲ್ಲಿ ಬೆಳಗ್ಗೆ 9ರಿಂದ ಉಚಿತ ತಪಾಸಣೆ ನಡೆಯಲಿದೆ. 10ರಿಂದ ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರಿಂದ ಬೀದಿ ನಾಟಕ ನಡೆಯಲಿದೆ.
ಕೈತ್ರೋಡಿ: 6ರಂದು ಯಕ್ಷಗಾನ ಬಯಲಾಟ
ಬಂಟ್ವಾಳ: ತಾಲೂಕಿನ ರಾಯಿ-ಕೊಯಿಲ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ವತಿಯಿಂದ ಫೆ.6ರಂದು ಬೆಳಗ್ಗೆ ರಾಯಿ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ ಇಲ್ಲಿನ ಕೈತ್ರೋಡಿ ಮೈದಾನದಲ್ಲಿ ಶ್ರೀ ದುರ್ಗಾಪರಮೆಶ್ವರಿ ಸೇವಾ ವೃಂದ ವತಿಯಿಂದ ಶ್ರೀ ಕ್ಷೇತ್ರ ಕಟೀಲು ಮೇಳದವರಿಂದ 22ನೇ ವರ್ಷದ ಯಕ್ಷಗಾನ ದ್ರೌಪದಿ ವಸ್ತ್ರಾಪಹಾರ, ದುಶ್ಯಾಸನ ವಧೆ, ಗರುಡ ಗರ್ವಭಂಗ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಭೀಕರ ರಸ್ತೆ ಅಪಘಾತ: ನಾಲ್ವರ ದುರ್ಮರಣ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ಸೇತುವೆಯಲ್ಲಿ ಸೋಮವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಬಸ್ ಹಾಗೂ ರಿಕ್ಷಾ ನಡುವೆ ಈ ಅಪಘಾತ ಸಂಭವಿಸಿದ್ದು, ಘಟನೆಯ ತೀವ್ರತೆಗೆ ನಾಲ್ವರು ದುರಂತ ಸಾವಿಗೀಡಾದರು. ನಾಲ್ಕು ವರ್ಷದ ಮಗುವನ್ನು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತರನ್ನು ಮಾಣಿ ಗ್ರಾಮದ ನಿವಾಸಿಗರು ಎಂದು ಹೇಳಲಾಗಿದ್ದು, ಸ್ಪಷ್ಟ ವಿವರ ಗೊತ್ತಾಗಿಲ್ಲ. ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತನಿರೀಕ್ಷಕ ರಾಜಶೇಖರ್ ಮಿಸ್ತ್ರಿ, ನಗರ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement