ಉಪ್ಪಿನಂಗಡಿ ಶ್ರೀ ವೆಂಕಟರಮಣ ದೇವರಿಗೆ ಚಿನ್ನದ ಕಿರೀಟ ಸಮರ್ಪಣೆ
ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಶ್ರೀ ವೆಂಕಟರಮಣ ದೇವರಿಗೆ ಭಕ್ತರು ನೀಡಿದ ಚಿನ್ನದ ಕಿರೀಟ ಹಾಗೂ ಸಾಲಿಗ್ರಾಮವಿಡುವ ಚಿನ್ನದ ಕರಡಿಗೆಯನ್ನು ಕಾಶಿ ಕಿರಿಯ ಮಠಾಧೀಶರು ಶ್ರೀ ದೇವರಿಗೆ ಮಂಗಳವಾರ ಸಮರ್ಪಿಸಿದರು. ಉಪ್ಪಿನಂಗಡಿ ನಿವಾಸಿ ತುಳಸಿ ರಾಘವೇಂದ್ರ ಭಟ್ ಮತ್ತು ಮಕ್ಕಳಾದ ಶ್ರೀಕಾಂತ್ ಭಟ್ ಸಹೋದರರು ಕೊಡುಗೆಯಾಗಿ ಕಿರೀಟ ನೀಡಿದ್ದಾರೆ. ಉಪ್ಪಿನಂಗಡಿಯ ವೆಂಕಟೇಶ್ ಭಟ್ ಮತ್ತು ಮಕ್ಕಳು ಚಿನ್ನದ ಕರಡಿಗೆಯನ್ನು ಶ್ರೀದೇವರಿಗೆ ಸಮರ್ಪಿಸಿದ್ದಾರೆ. ಆಡಳಿತ ಮೊಕ್ತೇಸರ ಉಪೇಂದ್ರ ಪೈ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.