ಮಾಸ್ಟರ್ ಚಾಂಪಿಯನ್ ಶಿಪ್ಗೆ ನಮ್ಮಲ್ಲಿ ಹೆಸರು ನೋಂದಾಯಿಸಿ
ಮಂಗಳೂರು: ಮಾ.7ರಿಂದ 9ರವರೆಗೆ ಥಾಯ್ಲ್ಯಾಂಡ್ನಲ್ಲಿ ನಾಲ್ಕು ದೇಶಗಳ ನಡುವಿನ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಮೇ 31 ಮತ್ತು ಜೂ.1ರಂದು ಮಲೇಶಿಯಾದಲ್ಲಿ ನಡೆಯುವ ಐದು ದೇಶಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಕ್ರೀಡಾಳುಗಳು ಫೆ.26ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ದ.ಕ. ಮತ್ತು ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಹಾಗೂ ಏಶ್ಯನ್ ಮಾಸ್ಟರ್ ಚಾಂಪಿಯನ್ ಶಿಪ್ಗೆ ಭಾರತ ತಂಡವನ್ನು ಆಯ್ಕೆ ಮಾಡುವ ಹಾಗೂ ಕಳುಹಿಸುವ ಮಾನ್ಯತೆ ಎಂಎಎಫ್ಐಗೆ ಮಾತ್ರ ಎಂದರು. ಸೆ.22ರಿಂದ 28ರವರೆಗೆ ಜಪಾನ್ ಟೋಕಿಯೊದಲ್ಲಿ ನಡೆಯುವ 18ನೇ ಏಶ್ಯನ್ ಮಾಸ್ಟರ್ ಚಾಂಪಿಯನ್ ಶಿಪ್ ಆಯ್ಕೆ ಫೆ.24ರಿಂದ 27ರವರೆಗೆ ಕೊಯಮತ್ತೂರಲ್ಲಿ ನಡೆಯಲಿದೆ. ಆಸಕ್ತ ಕ್ರೀಡಾಪಟುಗಳು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ರೈ (9449203102) ಸಂಪರ್ಕಿಸಬಹುದು. ಆಯ್ಕೆಯ ಮಾನ್ಯತೆ ಬಗ್ಗೆ ಗೊಂದಲಗಳು ಮೂಡಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದೆ ಎಂದರು.