ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂಸದರೊಂದಿಗೆ ವಿದ್ಯಾರ್ಥಿಗಳ ಸಂವಾದ

Lingaraj Badiger
Updated On : 5 Feb 2014, 11:28 am

ಕೋಟ: ಇಲ್ಲಿನ ಪಡುಕರೆಯ ಲಕ್ಷ್ಮಿ ಸೋಮ ಬಂಗೇರ ಸ.ಪ್ರ.ದ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಸದರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಡುಪಿ - ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಸಮಕಾಲೀನ ರಾಜಕಾರಣದ ಕುರಿತು ವಿದ್ಯಾರ್ಥಿಗಳು ಮುಕ್ತ ಚರ್ಚೆ ನಡೆಸಿದರು.
ಸಂಸದ ಹೆಗ್ಡೆ ಮಾತನಾಡಿ, ಪಡೆದ ಪದವಿಗೂ ಶಿಕ್ಷಣಕ್ಕೂ ಸಂಬಂಧವಿಲ್ಲ, ವಿದ್ಯಾರ್ಥಿಗಳು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
್ಲಎಲ್ಲರೂ ದಾರಿ ತಪ್ಪಿಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೆಗ್ಡೆ, ರಾಜಕಾರಣದಲ್ಲಿ ಎಲ್ಲರೂ ದಾರಿ ತಪ್ಪಿಲ್ಲ, ಸಾಕಷ್ಟು ಪ್ರಾಮಾಣಿಕರಿದ್ದಾರೆ, ಯುವಜನರು ಸಕಾರಾತ್ಮಕ ಪಾತ್ರ ನಿರ್ವಹಿಸುವುದರ ಮೂಲಕ ಅಪ್ರಾಮಾಣಿಕ ರಾಜಕಾರಣವನ್ನು ಬದಲಾಯಿಸಬೇಕು ಎಂದರು.
ಈ ಸಂವಾದದಲ್ಲಿ, ಕಳಂಕಿತ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಏಕೆ? ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸಂಸತ್ತಿನಲ್ಲಿ ಮೀಸಲಾತಿ ಅವಶ್ಯಕವೇ? ಇರುವ ಸರ್ಕಾರಿ ಕಾಲೇಜುಗಳಿಗೆ ಮೂಲ ಸೌಕರ್ಯಗಳ ಕೊರತೆ ಇರುವಾಗ ಹೊಸ ಕಾಲೇಜುಗಳ ಅನುಮತಿಗೆ ಅವಶ್ಯಕವೇ ಸರ್ಕಾರಿ ಯೋಜನೆಗಳು ಜಾರಿಯಾಗಲು ವಿಳಂಬವೇಕೆ? ಚುನಾವಣೆಯಲ್ಲಿ ಸ್ಪರ್ಧಿಸಲು ವಿದ್ಯಾರ್ಹತೆ ಬೇಕೆ? ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.
ಸ್ಥಳೀಯ ಉದ್ಯಮಿ ಆನಂದ್ ಸಿ. ಕುಂದರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ರಾಜೇಂದ್ರ ಎಸ್. ನಾಯಕ ಮತ್ತು ಭುಜಂಗ ಗುರಿಕಾರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಕುಂದರ್ ಇದ್ದರು.
ಪ್ರಾಂಶುಪಾಲ ಕೆಂಜೂರು ವಸಂತರಾಜ ಶೆಟ್ಟಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ನೀಲಾವರ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಉಪ್ಪೂರು ದಯಾನಂದ ಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement