ರಕ್ಷಣೆಗೆ ಮಹಿಳಾ ಸೈನ್ಯ ನಿರ್ಮಿಸಿ
ಮಂಗಳೂರು: ಉಳ್ಳಾಲ ಗಲಭೆ ಪೀಡಿದ ಪ್ರದೇಶಗಳಿಗೆ ಸುಲೋಚನ ಜಿ.ಕೆ. ಭಟ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮ ಜತೆ ಮಾತನಾಡಿ ಅವರು, ಮಹಿಳೆಯರು ಛತ್ತಿಸ್ಗಡ ಮಾದರಿಯಲ್ಲಿ ಮಹಿಳಾ ಸೈನ್ಯ ನಿರ್ಮಿಸಿ ತಮ್ಮ ರಕ್ಷಣೆ ಮಾಡುವ ಅನಿವಾರ್ಯತೆ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ತಾಲಿಬಾನಿ ಸಂಸ್ಕೃತಿ ಹೆಚ್ಚುತ್ತಿದೆ. ಉಳ್ಳಾಲ ಘಟನೆ ಇದಕ್ಕೆ ಉದಾಹರಣೆ. ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಮೂಲಕ ಕಿಡಿಗೇಡಿಗಳು ಹೇಯಕೃತ್ಯ ಎಸಗಿದ್ದಾರೆ. ರಾಜ್ಯ ಆರೋಗ್ಯ ಸಚಿವ, ಈ ಕ್ಷೇತ್ರದ ಶಾಸಕ ಯು.ಟಿಖಾದರ್ ನಿರ್ಲಕ್ಷ್ಯ ಇದಕ್ಕೆಲ್ಲ ಕಾರಣ. ಪೊಲೀಸರು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದರು.
ಈ ಸಂದರ್ಭ ಮಾಜಿ ಶಾಸಕ ಎನ್.ಯೋಗೀಶ್ ಭಟ್, ಮೀನುಗಾರಿಕೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ್ ಕುಂಪಲ ಇದ್ದರು.