ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರು. 3 ಲಕ್ಷ ಕೋಟಿ ವ್ಯವಹಾರ ಗಡಿ ದಾಟಿದ ಕಾರ್ಪ್ ಬ್ಯಾಂಕ್

Vishwanath S
Updated On : 8 Feb 2014, 1:33 am

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ 3 ಲಕ್ಷ ಕೋಟಿ ಗಡಿ ದಾಟಿ ವ್ಯವಹಾರ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಕಾರ್ಪೊರೇಶನ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಬನ್ಸಾಲ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಮೂರನೇ ತ್ರೈಮಾಸಿಕ ಹಣಕಾಸು ವ್ಯವಹಾರದ ವಿವರ ನೀಡಿದರು. 2013 ಡಿಸೆಂಬರ್‌ಗೆ ಹಣಕಾಸು ವ್ಯವಹಾರ ಕಳೆದ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.23 ಹೆಚ್ಚಳ ದಾಖಲಿಸಿದ್ದು, 301,375 ಕೋಟಿ ವ್ಯವಹಾರ ಮಾಡಿದೆ ಎಂದರು. ಠೇವಣಿ ಶೇ.26,68  ಹೆಚ್ಚಳವಾಗಿದ್ದು, 177,845 ಕೋಟಿ ದಾಖಲಾಗಿದೆ. ಸಾಲ ನೀಡಿಕೆ ಶೇ.18.28 ಪ್ರಗತಿಯಾಗಿದ್ದು, 123,530 ಕೋಟಿ ತಲುಪಿದೆ.
 ತಲಾ ಅದಾಯದಲ್ಲಿ ಹೆಚ್ಚಳವಾಗಿದ್ದು, 1001 ಕೋಟಿ ದಾಖಲಿಸಿದೆ. ಹಣಕಾಸು ವರ್ಷದ 9ನೇ ತಿಂಗಳಲ್ಲಿ ನಿವ್ವಳ ಬಡ್ಡಿ ಆದಾಯ 2876 ಕೋಟಿ ದಾಖಲಿಸಿದ್ದು, ಕಳೆದ ಬಾರಿಗಿಂತ ಶೇ.15 ಹೆಚ್ಚಳ ಸಾಧಿಸಿದೆ. ಆದಾಯ ಕಳೆದ ತ್ರೈಮಾಸಿಕಕ್ಕಿಂತ ಶೇ.12 ಪ್ರಗತಿಯಾಗಿದ್ದು, 743 ಕೋಟಿ ಯಾಗಿದೆ. ಆದರೆ ಒಟ್ಟಾರೆ ಲಾಭದಲ್ಲಿ ಇಳಿಕೆಯಾಗಿದೆ. ಕೃಷಿಯತ್ತ ಗಮನ: ಈ ವರ್ಷ ಕೃಷಿ ಸಾಲ ಮೇಲೆ ಬ್ಯಾಂಕ್ ಗಮನ ಹರಿಸಿದೆ. ಸಣ್ಣ ಮತ್ತು ಮಧ್ಯಮ, ಚಿಲ್ಲರೆ ವ್ಯಪಾರ ಕ್ಷೇತ್ರದ ಮೇಲೂ ಗಮನ ಹರಿಸಲಾಗಿದೆ. ಆದರೆ ಬೃಹತ್ ಕೈಗಾರಿಕೆ ವಿಭಾಗದಲ್ಲಿ ಸಾಲ ನೀಡುವಾಗ ಚ್ಯೂಸಿಯಾಗಿರುತ್ತೇವೆ ಎಂದರು. ಅಂಡ್ರಾಯ್ಡ್ ಮತ್ತು ಐಒಎಸ್, ಟ್ಯಾಬ್ಲೆಟ್ಸ್ ಮೂಲಕ ವಿಶೇಷ ಮೊಬೈಲ್ ಬ್ಯಾಂಕ್ ಆ್ಯಪ್ ಪರಿಚಯಸಿದೆ. ಇದರಲ್ಲಿ ವಿಶೇಷ ಸೌಲಭ್ಯ, ಸೇವೆಗಳು ನೀಡಲಾಗುತ್ತಿದೆ. ದೇಶದಲ್ಲಿ 3926 ಕಡೆಗಳಲ್ಲಿ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಎಎಸ್‌ಇ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ, ಕಿರುಉದ್ದಿಮೆ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement