ನಾಳೆಯಿಂದ 'ಭಾರತ ಗೆಲ್ಲಿಸಿ'
ಪುತ್ತೂರು: ಬಿಜೆಪಿ ಪುತ್ತೂರು ಮಂಡಲ ಯುವ ಮೋರ್ಚಾ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಫೆ.11ರಿಂದ 13ರತನಕ 'ಭಾರತ ಗೆಲ್ಲಿಸಿ' ರಥಯಾತ್ರೆ ನಡೆಯಲಿದೆ ಎಂದು ಪುತ್ತೂರು ಮಂಡಲ ಯುವ ಮೋಚಾ ಅಧ್ಯಕ್ಷ ಶಿವರಂಜನ್ ಎಂ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11ರಂದು ಬೆಳಗ್ಗೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ರಥಯಾತ್ರೆ ಉದ್ಘಾಟನೆಗೊಳ್ಳಲಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಪುತ್ತೂರು ಮಂಡಲ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. 13ರಂದು ಸಂಜೆ ಪುತ್ತೂರಿನ ಕಲ್ಲೇಗ ಕಲ್ಕುಡ ದೇವಸ್ಥಾನ ಬಳಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಪುತ್ತೂರು ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಈಶ್ವರಮಂಗಲ, ಕಾರ್ಯದರ್ಶಿ ವಿನೋದ್ ಕಲ್ಲೇಗ, ಜಿಲ್ಲಾ ಕಾರ್ಯದರ್ಶಿ ಯತೀಂದ್ರ ಕೊಚ್ಚಿ ಮತ್ತು ತಾಲೂಕು ಉಪಾಧ್ಯಕ್ಷ ಹರೀಶ್ ಕುಲಾಲ್ ಇದ್ದರು.