ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಾಷ್ಟ್ರ ಮಟ್ಟದ ಹಿರಿಯರ ಅತ್ಲೆಟಿಕ್ಸ್: ಕರ್ನಾಟಕ, ಮಹಾರಾಷ್ಟ್ರ ಪೈಪೋಟಿ

Mainashree
Updated On : 10 Feb 2014, 9:50 am

ಮಂಗಳೂರು: ಇಂಡಿಯನ್ ಮಾಸ್ಟರ್ಸ್ ಅತ್ಲೆಟಿಕ್ಸ್ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಜರುಗಿದ 34ನೇ ರಾಷ್ಟ್ರೀಯ ಹಿರಿಯ ಅತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅತಿಥೇಯ ಕರ್ನಾಟಕ ಮತ್ತು ಮಹಾರಾಷ್ಟ್ರ ಸಮಬಲದ ಪೈಪೋಟಿ ನೀಡಿವೆ. ಈ ಬಾರಿ ನೆರೆ ರಾಷ್ಟ್ರ ಶ್ರೀಲಂಕಾ ಕೂಡ ಆಹ್ವಾನಿತ ತಂಡವಾಗಿ ಪಾಲ್ಗೊಂಡಿತ್ತು.
ಭಾನುವಾರ ನಡೆದ ಸಮಾರೋಪದಲ್ಲಿ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಈ ಕ್ರೀಡೆಗೆ ರು. 10 ಲಕ್ಷ ಅನುದಾನ ಕೇಳಿದ್ದು, ಮಂಗಳವಾರ ರು. 5 ಲಕ್ಷ ಬಿಡುಗಡೆಗೊಳಿಸಲಾಗುವುದು. ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿಯಾಗಿದ್ದು, ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಹಿರಿಯರಿಗೆ ಸಲಹೆ ಮಾಡಿದರು.
ಇಂಡಿಯನ್ ಮಾಸ್ಟರ್ಸ್ ಅತ್ಲೆಟಿಕ್ಸ್ ಅಧ್ಯಕ್ಷ ಟಿ.ಒ.ಜಾಕೊಬ್ ಅಧ್ಯಕ್ಷತೆ ವಹಿಸಿದ್ದರು.
ದೇಶದ 22 ರಾಜ್ಯಗಳಿಂದ 1,500 ಮಂದಿ ಅತ್ಲೀಟ್‌ಗಳು ಆಗಮಿಸಿದ್ದರು. 32ರಿಂದ 85 ವರ್ಷ ವರೆಗಿನ ಅತ್ಲೀಟ್‌ಗಳು 356 ವಿಧದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಪ್ರದೀಪ್ ಪೆರೇರಾ ನಾಯಕತ್ವದಲ್ಲಿ 10 ಮಂದಿಯ ಶ್ರೀಲಂಕಾ ತಂಡ ಆಗಮಿಸಿತ್ತು. ಸಮಾರಂಭದಲ್ಲಿ ಹಿರಿಯ ಅತ್ಲೀಟ್‌ಗಳನ್ನು ಗೌರವಿಸಲಾಯಿತು. ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ, ಮಾಸ್ಟರ್ ಅತ್ಲೆಟಿಕ್ಸ್ ಕಾರ್ಯದರ್ಶಿ ಜಯರಾಮಯ್ಯ, ಜತೆ ಕಾರ್ಯದರ್ಶಿ ಪಿ.ಎಸ್.ನಾಯ್ಡು, ದ.ಕ. ಮಾಸ್ಟರ್ಸ್ ಅತ್ಲೆಟಿಕ್ಸ್ ಅಧ್ಯಕ್ಷ ರಾಮೇ ಗೌಡ, ಸಂಘಟನಾ ಸಂಚಾಲಕ ಕೆ.ತೇಜೋಮಯ, ಗೌರವ ಕಾರ್ಯದರ್ಶಿ ಜೆರಾಲ್ಡ್ ಡಿಸೋಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement