ಸುದ್ದಿ ಸಂಕ್ಷೇಪ
ಅರ್ಜಿ ಆಹ್ವಾನ
ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2013-14ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಸಂಘಟಿತ ಕಲಾವಿದರಿಗೆ, ಕಲಾತಂಡಗಳಿಗೆ ರು. 25 ಸಾವಿರ ಮೌಲ್ಯದ ವಾದ್ಯ ಪರಿಕರ, ವೇಷಭೂಷಣ ತಾಲೂಕಿನ 2 ತಂಡಗಳಿಗೆ ನೀಡಲಾಗುತ್ತದೆ. ಅರ್ಜಿಯನ್ನು ಸ್ಥಳೀಯ ಪಂಚಾಯ್ತಿ, ಪುರಸಭೆಯಿಂದ ಪಡೆದುಕೊಳ್ಳಬಹುದು. ಫೆ. 12 ಕೊನೆ ದಿನ. ಹೆಚ್ಚಿನ ಮಾಹಿತಿಗೆ 0824-2441527 ಸಂಪರ್ಕಿಸಬಹುದು.
ಬಾವಿಗೆ ಬಿದ್ದು
ಯುವತಿ ಮೃತ
ಕಾಪು; ಉದ್ಯಾವರ ಸಮೀಪದಲ್ಲಿ ಸಾನಾ ಎಂಬ ಯುವತಿಯೊಬ್ಬಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ಬಗ್ಗೆ ಮೃತರ ಸಂಬಂಧಿ ಮುಬಿನ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.