55 ಸಾವಿರ ಡಾಲರ್ ವಶ
ಮಂಗಳೂರು: ದುಬೈ- ಮಂಗಳೂರು ಯಾನ ಸ್ಮಗ್ಲರ್‌ಗಳ ತಾಣವಾಗಿ ಪರಿಣಿಸಿದೆ. ಮಂಗಳೂರಿಂದ ದುಬೈಗೆ 55 ಸಾವಿರ ಡಾಲರ್ ಒಯ್ಯಲು ಸಿದ್ಧನಾಗಿದ್ದ ವಿಮಾನ ಪ್ರಯಾಣಿಕನನ್ನು ಬಜಪೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಾಸರಗೋಡು ಕುಡ್ಲು ಅಬ್ದುಲ್ ಬಶೀರ್ ಕಡಪ್ಪುರಂ ಮೊಹಮ್ಮದ್ ಎಂಬಾತ ಬಂಧಿತ. 34 ಲಕ್ಷ ಮೌಲ್ಯದ ಅಮೆರಿಕ ಡಾಲರ್ ನೋಟುಗಳನ್ನು ಟ್ರಾಲಿ ಲಗೇಜ್‌ನಲ್ಲಿ ತರುತ್ತಿದ್ದ. ಬೆಳಿಗ್ಗೆ 8.55 ದುಬೈ ವಿಮಾನದಲ್ಲಿ ತೆರಳುವವನಿದ್ದ. ಆದರೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಇತ್ತೀಚಿನ ದಿನಗಳಲ್ಲಿ ದುಬೈಯಿಂದ ಕಾಸರಗೋಡಿಗೆ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ತರಲಾಗುತ್ತಿದೆ.
ವೃದ್ಧೆ ಅತ್ಯಾಚಾರ ನಡೆದಿಲ್ಲ
ಮಂಗಳೂರು: ಕುಳಾಯಿ ಹೊಸಬೆಟ್ಟು ಬಳಿ ವೃದ್ಧೆಯ ಕತ್ತು ಕೊಯ್ದು ಕೊಲೆ ಮಾಡಿದ್ದು, ಅತ್ಯಾಚಾರ ನಡೆಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ. ಸುಮತಿ (68) ಎಂಬವರನ್ನು ಶನಿವಾರ ರಾತ್ರಿ ಕೊಲೆ ಮಾಡಲಾಗಿತ್ತು. ಅವರ ದೇಹದ ಮೇಲಿದ್ದ 30 ಪವನ್ ಬಂಗಾರವನ್ನು ಕದ್ದು ಒಯ್ದಿದ್ದರು. ಪ್ರತಿಭಟಿಸುವಾಗ ಸೀರೆ ಅಸ್ತವ್ಯವಸ್ತವಾಗಿದ್ದು, ಮೇಲ್ನೋಟಕ್ಕೆ ಅತ್ಯಾಚಾರ ನಡೆಸಿದಂತೆ ತೋರುತ್ತಿತ್ತು. ಆದರೆ ಆತ್ಯಾಚಾರ ನಡೆದಿಲ್ಲ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.