ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಳ್ಳಾಲ: ಕೋಮುಗಲಭೆ ರೂವಾರಿಗಳ ಸೆರೆ

Rashmi Kasaragodu
Updated On : 11 Feb 2014, 2:36 am

ಮಂಗಳೂರು: ಉಳ್ಳಾಲ ಪರಿಸರದಲ್ಲಿ ಗಲಭೆಗೆ ಕಾರಣರಾದ ಇಬ್ಬರು ರೌಡಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
 ಕೋಟೆಪುರ ಅಕ್ಷರ್ ಮಂಝಿಲ್ ನಿವಾಸಿ ಮಹಮ್ಮದ್ ಶಬೀರ್ ಯಾನೆ ಮಹಮ್ಮದ್ ಕಬೀರ್ ಯಾನೆ ಚೆಬ್ಬಿ, ಬರಾಕ ಫ್ಯಾಕ್ಟರಿ ಬಳಿಯ ಆಯೆಶಾ ಮಂಝಿಲ್ ನಿವಾಸಿ ಅಬ್ದುಲ್ ಮನ್ನಾನ್ ಯಾನೆ ಮುನಾಫ್ ಬಂಧಿತರು.    ಕಬೀರ್ ಫಿಶ್ ಆಯಿಲ್ ಮಿಲ್ ಸೆಕ್ಯುರಿಟಿ ಗಾರ್ಡ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ. ಮನ್ನಾನ್ ವಿರುದ್ಧವೂ ಅನೇಕ ಕ್ರಿಮಿನಲ್ ಪ್ರಕರಣಗಳಿವೆ.
 ಇವರು ಮೊಗವೀರಪಟ್ಣದ ಪರಿಸರದ ಮಹಿಳೆಯರ ಮನೆಗಳಿಗೆ ನುಗ್ಗಿ ಕಿರುಕುಳ ನೀಡುತ್ತಿದ್ದರು.
 ಫೆ.4ರಂದು ರಾತ್ರಿ ಮೀನುಗಾರ ಮಹಿಳೆಯರ ಮನೆಗೆ ನುಗ್ಗಿ ಕಿರುಕುಳ ನೀಡಿದ ಬಳಿಕ ಕೋಮುಗಲಭೆ ನಡೆದಿತ್ತು. ಫೆ.4ರಂದೇ ಇವರಿಬ್ಬರು ಊರು ಬಿಟ್ಟು ಪರಾರಿಯಾಗಿದ್ದರು.
 ಉಳ್ಳಾಲ ಪೊಲೀಸರು ಇಬ್ಬರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಕೋಮು ಗಲಭೆಗೆ ಸಂಚು ಹೂಡಿರುವ ಬಗ್ಗೆ ಬಾಯಿ ಬಿಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.


ವ್ಯಕ್ತಿ ಆತ್ಮಹತ್ಯೆ



ಹಿರಿಯಡ್ಕ: ಇಲ್ಲಿನ ಅಂಜಾರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.  ಮೃತರು ಆನಂದ ಮೈಂದನ್ (56), ಅವರಿಗೆ ವಿಪರೀತ ಶರಾಬು ಕುಡಿತದ ಚಟವಿದ್ದು, ಇದರಿಂದ  ಸಂಸಾರ ನಿರ್ವಹಣೆ ಮಾಡುವ ವಿಚಾರದಲ್ಲಿ ಮನನೊಂದು ತಮ್ಮ ವಾಸ್ತವ್ಯದ ಮನೆ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಕೇಸು ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement