ಕಾಶಿಬೆಟ್ಟ: ದುರ್ಗಾ ಕಾಳಿಕಾಂಬಾ ಕ್ಷೇತ್ರದ ಬ್ರಹ್ಮಕಲಶೋತ್ಸವ ಆರಂಭ
ಬೆಳ್ತಂಗಡಿ: ಶ್ರೀ ದುರ್ಗಾ ಕಾಳಿಕಾಂಬಾ ಕ್ಷೇತ್ರ ಕಾಶಿಬೆಟ್ಟದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು, 14ರವರೆಗೆ ನಡೆಯಲಿದೆ.
ಈ ಪ್ರಯುಕ್ತ ಸೋಮವಾರ ಊರವರಿಂದ ದೇವಸ್ಥಾನಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು.
ಇಂದಿನ ಕಾರ್ಯಕ್ರಮ: ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ವಿವಿಧ ವೈದಿಕ ಕಾರ್ಯಕ್ರಮ, ಸಂಜೆ 4 ಗಂಟೆಗೆ ಬೆಳ್ತಂಗಡಿ ಹಳೆಕೋಟೆಯ ಶ್ರೀ ಸತ್ಯಸಾಯಿ ಭಜನಾ ಮಂಡಳಿಯಿಂದ ಭಜನಾ ಸತ್ಸಂಗ ನಡೆಯಲಿದೆ. ಬಳಿಕ ಸವಣಾಲು ಹೆಬ್ಬಾರ ಹಿತ್ತಿಲು ಗುರುನಾಥ ಭಟ್ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.
ಸಂಜೆ 6.30 ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಗಣಪತಿ ಭಟ್ ಕುಳಮರ್ವ, ಡಾ.ಕೆ. ಗಂಗಾಧರ ಶೇಕ, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಕೆ.ಕೆ. ಸಂಪಿಗೆತ್ತಾಯ, ಬಿಜೆಪಿ ದ.ಕ. ಜಿಲ್ಲಾ ಯುವ ಮೋರ್ಚಾ ರಂಜನ್ ಜಿ. ಗೌಡ, ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಆಚಾರ್ಯ ಪಾಲ್ಗೊಳ್ಳಲಿದ್ದಾರೆ.
ರಾತ್ರಿ 7 ಗಂಟೆಯಿಂದ ಶಾಂತಿಪಾಠ, ರತ್ನನ್ಯಾಸ ಪೂರ್ವಕ ಪೀಠಪ್ರತಿಷ್ಠೆ, ಜಪಪಾರಾಯಣಾದಿಗಳು ನಡೆಯಲಿವೆ. 8 ಗಂಟೆಯಿಂದ ಸವಣಾಲಿನ ನೇತಾಜಿ ಸುಭಾಷ್ಚಂದ್ರ ಬೋಸ್ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಹಳೆವಿದ್ಯಾರ್ಥಿಗಳಿಂದ ಗಂಗಾ ಕಾವೇರಿ ಎಂಬ ಹಾಸ್ಯಮಯ ನಾಟಕ ನಡೆಯಲಿದೆ.